ಭೀಮ ಕೋರೆಗಾಂವ್ ಪ್ರಕರಣ: ಬಂಧಿತ ಪ್ರೊ. ಶೋಮಾ ಸೇನ್ ಅಮಾನತು

ಮುಂಬೈ: ಭೀಮ ಕೋರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಪ್ರೊ. ಶೋಮಾ ಸೇನ್ ಅವರನ್ನು, ನಾಗಪುರ ವಿಶ್ವವಿದ್ಯಾಲಯ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಶೋಮಾ ಸೇನ್ ಅವರನ್ನು ಪುಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 7ರಂದು ಬಂಧಿಸಲಾಗಿದ್ದ 5 ಆರೋಪಿಗಳನ್ನು ಜೂನ್ 21ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇದಕ್ಕೂ ಮುನ್ನ ಅವರನ್ನು 14ರ ವರೆಗೆ ವಶಕ್ಕೆ ಒಪ್ಪಿಸಲಾಗಿತ್ತು.

ಸುಧೀರ್ ಧಾವಲೆ, ರೋಣ ಜೇಕಬ್, ಶೋಮಾ ಸೇನ್ ಮತ್ತು ಮಹೇಶ್ ರೌತ್ ಅವರನ್ನು ಮುಂಬೈನ ಥಾಣೆ ಪೊಲೀಸರು, ಮುಂಬೈ, ನಾಗಪುರ, ದೆಹಲಿಗಳಲ್ಲಿ ಬಂಧಿಸಿದ್ದರು. ಜನವರಿ 2, 2018ರಂದು ನಡೆದಿದ್ದ ಭೀಮ ಕೋರೆಗಾಂವ್​ನ 200ನೇ ವರ್ಷಾಚರಣೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಈ ವೇಳೆ ಒಬ್ಬ ದಲಿತ ಯುವಕ ಬಲಿಯಾಗಿದ್ದ. ಜೊತೆಗೆ 10 ಪೊಲೀಸರು ಸೇರಿದಂತೆ ನಾಗರಿಕರು ಗಾಯಗೊಂಡಿದ್ದರು.

0

Leave a Reply

Your email address will not be published. Required fields are marked *