ಸಾವಿತ್ರಿ ಬಾಯಿ ಫುಲೆ ಚಿತ್ರ ಪ್ರದರ್ಶನ

ಬೆಂಗಳೂರು: ಕೊಡಗಿಗಾಗಿ ರಂಗ ಸಪ್ತಾಹ ನಡೆಸಿದ ಪೀಪಲ್ಸ್ ಫಾರ್ ಪೀಪಲ್ ತಂಡ ಬೆಂಗಳೂರಿನಲ್ಲಿ ನಾಳೆ ಸಾವಿತ್ರಿ ಬಾಯಿ ಫುಲೆ ಚಲನಚಿತ್ರ ಪ್ರದರ್ಶನವನ್ನು ಆಯೋಜಿಸಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಒಕ್ಕೂಟದ ಆಡಿಟೋರಿಯಂ, ಚಾಮರಾಜಪೇಟೆ, ಬೆಂಗಳೂರಿನಲ್ಲಿ ನಾಳೆ ಸಂಜೆ 6 ಗಂಟೆಗೆ ಪ್ರದರ್ಶನ ಆಗಲಿದೆ.

ನಾಡಿನ ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರರು, ದಲಿತಪರ ಚಿಂತಕರು ಮತ್ತು ನಾಡಿನ ವಿವಿಧ ಕ್ಷೇತ್ರದ ಗಣ್ಯರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವವರು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ 9008033336/9916486566

0

Leave a Reply

Your email address will not be published. Required fields are marked *