ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡ್ರೆಸ್ ಕೋಡ್…!

ಶಾಲೆಗಳಿಗೆ ಡ್ರೆಸ್​ ಕೋಡ್ ಇದೆ, ಕೆಲಸ ಮಾಡೋ ಸ್ಥಳಗಳಲ್ಲಿ ಡ್ರೇಸ್ ಕೋಡ್ ಇರತ್ತೆ, ಇನ್ನು ದೇವಾಲಯಗಳಲ್ಲೂ ಡ್ರೇಸ್ ಕೋಡ್ ಹಲವು ಕಡೆ ಕಡ್ಡಾಯ . ಕರ್ನಾಟಕದಲ್ಲೂ ಆ ಬಗ್ಗೆ ಚರ್ಚೆಗಳು ನಡೀತಿವೆ. ಅದ್ರೇ ಬೆಂಗಳೂರಿನ ಒಂದು ಪ್ರಸಿದ್ದ ದೇವಾಲಯದಲ್ಲಿ ಈಗ ಗಂಡು ಹೆಣ್ಣು ಯಾವ ಉಡುಪು ಧರಿಸಿ ಬರಬೇಕು ಎಂದು ಚಿತ್ರ ಸಮೇತ ಫಲಕ‌ ಹಾಕಿದ್ದಾರೆ.ಇಷ್ಟು ದಿನ ಸ್ಕೂಲ್ ಮತ್ತು ಆಫೀಸ್​ನಲ್ಲಿದ್ದ ಡ್ರೆಸ್ ಕೋಡ್​ ಇದೀಗ ದೇವಸ್ಥಾನಗಳಿಗು ಬಂದಿದೆ. ಬೇರೆ ರಾಜ್ಯಗಳ ಪ್ರಸಿದ್ಧ ದೇವಸ್ಥಾನಗಳಲ್ಲಿ ಈ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು. ಆದ್ರೆ ಕರ್ನಾಟಕದಲ್ಲಿ ಈ ಕುರಿತು ಗಂಭೀರವಾದ ಚಿಂತನೆ ನಡೆದಿರಲಿಲ್ಲ. ಇದೀಗ ಬೆಂಗಳೂರಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಮನಸ್ಸಿಗೆ ಬಂದ ಡ್ರೆಸ್ ಧರಿಸಿಕೊಂಡು ಹೋಗುವ ಹಾಗಿಲ್ಲ. ಬೆಂಗಳೂರಿನ ಈ ಪ್ರಸಿದ್ಧ ದೇವಾಲಯದಲ್ಲೂ ಇದೀಗ ವಸ್ತ್ರ ಸಂಹಿತೆ ನಿಯಮ ಜಾರಿಗೆ ಬಂದಿದೆ. ದೇವಸ್ಥಾನದ ಮುಂಭಾಗದಲ್ಲಿಯೇ ವಸ್ತ್ರ ಸಂಹಿತೆಯ ಫಲಕ ನೇತುಹಾಕಲಾಗಿದೆ. ಈ ಫಲಕದಲ್ಲಿ ಯಾವ ತೆರನಾದ ವಸ್ತ್ರ ಧರಿಸಿಬರಬೇಕೆಂದು ಮಾಹಿತಿ ನೀಡಲಾಗಿದೆ.

ವಸ್ತ್ರ ಸಂಹಿತೆ

ಪುರುಷರು ಯಾವ ಬಟ್ಟೆ ಹಾಕಬೇಕು, ಹಾಕಬಾರದು
————————————————–
ಜೀನ್ಸ್, ಶಾಟ್ಸ್, ಅರ್ಧ ಪ್ಯಾಂಟ್ ಮತ್ತು ಟಿ–ಶರ್ಟ್ ಗಳನ್ನು ಧರಿಸಿಬರುವಂತಿಲ್ಲ

ಪುರುಷರು ಪಂಚೆ, ಪ್ಯಾಂಟ್, ಧೋತಿ, ಪಂಚೆ, ಶಲ್ಯ ಮತ್ತು ಶರ್ಟ್‍ಗಳನ್ನು ಧರಿಸಿ ಬರಬೇಕು

ಮಹಿಳೆಯರು ಯಾವ ಉಡುಪು ಧರಿಸಬೇಕು, ಯಾವುದು ಧರಿಸಿ ಬರಬಾರದು
————————————————————————-
ಜೀನ್ಸ್, ಬರ್ಮೋಡಾ, ಮಿಡಿ, ಶಾರ್ಟ್ಸ್ ಧರಿಸಿ ಬರಬಾರದು

ಸೀರೆ ಹಾಗೂ ಸಲ್ವಾರ್ ಕಮಿಜ್‍ ಧರಿಸಬಹುದು

ಇನ್ನು ದೇವಸ್ಥಾನದ ಈ ನಿಯಮ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ಭಕ್ತ ಸಮೂಹ ದೇವಸ್ಥಾನದ ಈ ಕ್ರಮವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದೆ. ಈ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿದೆ ಎಂದು ಶ್ಲಾಘಿಸುತ್ತಿದ್ದಾರೆ. ಆದ್ರೆ ಇನ್ನೊಂದು ಪಂಗಡ ದೇವಸ್ಥಾನಕ್ಕೆ ಇಂತಹದ್ದೆ ಡ್ರೆಸ್ ಧರಿಸಿ ಹೋಗಬೇಕೆಂಬ ನಿಯಮ ಸರಿಯಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಹಳೆಯ ಪದ್ಧತಿಗಳನ್ನು ಅನುಸರಿಸುವುದು ಸರಿಯಲ್ಲವೆಂದು ವಾದಿಸುತ್ತಿದ್ದಾರೆ. ಆದ್ರೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ಈ ನಿಯಮದ ಕುರಿತಾಗಿ ಪ್ರತಿಕ್ರಯಿಸಲು ನಿರಾಕರಿಸಿತು.  ಒಟ್ಟಾರೆ ಇನ್ನು ಮುಂದೆ ನೀವು ರಾಜರಾಜೇಶ್ವರಿ ದೇವಾಲಯಕ್ಕೆ ಹೋಗಬೇಕು ಅಂದ್ರೇ‌ ಈ ಡ್ರೇಸ್ ಕೋಡ್ ಕಡ್ಡಾಯ . ಇಲ್ಲದೇ ಹೋದ್ರೇ ನೀವು‌ ಮನೆಗೆ‌ ವಾಪಾಸ್ ಬರಬೇಕಾಗುತ್ತೆ.

ಸುಬ್ರಹ್ಮಣ್ಯ ಎಸ್ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *