ಕೋಟಿ ಕೋಕಾಗೆ ತಾಯಿಯಾದ ಸಂಭ್ರಮ..

ಆಗಷ್ಟೇ ಕಣ್ಣು ತೆರೆದು ಅಂಬೆಗಾಲಿಡ್ತಿರೋ ಮುದ್ದು ಮರಿಗಳು.. ಅಮ್ಮನ ಮಡಿಲಲ್ಲಿ ಇನ್ನೊಂದಿಷ್ಟು ಹೊತ್ತು ಇರ್ತೀವಿ ಅನ್ನೋ ಅವುಗಳ ಮುಗ್ದ ನೋಟ.. ಯಾರಿಗಾದ್ರೂ ಎತ್ತಿ ಮುದ್ದಾಡ್ಬೇಕು ಅನ್ನಿಸೋ ಮುಗ್ಧತೆ.. ಅವು ನಮ್ಮ ದೇಶದ ದುಬಾರಿ ಅತಿಥಿಗಳು..ದುಬಾರಿ ನಾಯಿಗಳನ್ನು ಸಾಕಿ ಸಲಹೋದೇ ಸಿಲಿಕಾನ್ ಮಂದಿಗೆ ಏನೋ ಓಂಥರಾ ಕ್ರೇಜ್.. ಈಗಾಗಲೇ ಕೋಟಿ ಬೆಲೆ ಕೊಟ್ಟು ವಿದೇಶದಿಂದ ಮೆಟ್ರೋನಗರಿ ಬೆಂಗಳೂರಿಗೆ ಕೊರಿಯನ್ ಮಾಸ್ಟಿಫ್ ತಳಿಯ ಕೋಕಾಳನನ್ನು ಕರೆತಂದಿದ್ದಾರೆ. ಅಂದಾಹಾಗೆ ಇದರ ಮಾಲೀಕ ಬನಶಂಕರಿ ಸತೀಶ್​. ಕೋಕಾಳಿಗೆ 45 ಲಕ್ಷ ಖರ್ಚು ಮಾಡಿ ಜರ್ಮನಿಯಿಂದ ಸ್ಪರ್ಮ್ಸ್ ತರಿಸಿ ಕೋಕಾಳಿಗೆ ತಾಯಿಯಾಗೋ ಭಾಗ್ಯ ಕೊಟ್ಟಿದ್ದಾರೆ. ಕೋಕಾ 4 ಮರಿಗಳಿಗೆ ಜನ್ಮ ನೀಡಿದ್ಲು.. ಅದರಲ್ಲಿ 2 ಗಂಡು ಮರಿಗಳು ಬದುಕಿದ್ದು, ಇನ್ನೆರಡು ಮರಿಗಳು ಹುಟ್ಟುವಾಗಲೇ ಕೊನೆಯುಸಿರೆಳೆದಿವೆ..

ಇನ್ನು ಭಾರತದಲ್ಲಿ ಕೊರಿಯನ್ ಮಾಸ್ಟಿಫ್ ಬೇರೆಲ್ಲೂ ಇಲ್ಲ ಈಗಾಗಿ ಈ ತಳಿಗೆ ಸಖತ್ ಡಿಮ್ಯಾಂಡೋ ಡಿಮ್ಯಾಂಡ್​. ಮರಿ ಹಾಕಿದ ದಿನವೇ ಮರಿಗಳನ್ನು ಲಕ್ಷ ಲಕ್ಷ ಕೊಟ್ಟು ಕೊಂಡ್ಯೋಯೋದಕ್ಕೆ ಸಾಕಷ್ಟು ಮಂದಿ ಮುಂದಾಗಿದ್ದಾರೆ. ಇನ್ನು ನಿತ್ಯ ಕೋಕಾಳಿಗೆ ಬೋನ್​​ ಲೆಸ್​ ಚಿಕನ್​ ನೀಡಲಾಗುತ್ತು. ಜೊತೆಗೆ ಮರಿಗೆಗಳಿಗೆ ಹಾಲನ್ನ ನೀಡಲಾಗುತ್ತಿದೆ. ಸತೀಶ್ ಅವರು ನಾಯಿ ಸಾಕಲು ಒಂದು ಉದ್ದೇಶ ಕೂಡ ಇದೆ ಅದನ್ನ ಅವರೇ ಹೇಳ್ತಾರೆ ಕೇಳಿ.ಒಟ್ನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ನಾಯಿ ಮರಿಗಳಿಗೆ ಒಳ್ಳೆ ಬೇಡಿಕೆ ಕ್ರಿಯೇಟ್ ಆಗಿದೆ. ಇದರಿಂದ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾದ್ರೂ ಅಗಬಹುದೇನೋ..
——————
ಉಮೇಶ್​​ ಉದುಸೆ ಸುದ್ದಿಟಿವಿ ಬೆಂಗಳೂರು.

1+

Leave a Reply

Your email address will not be published. Required fields are marked *