ಉತ್ತರ, ದಕ್ಷಿಣ ಕರ್ನಾಟಕ, ಕರಾವಳಿಯಲ್ಲಿ ಮಳೆ ಅಬ್ಬರ…

ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದ ಹಲವೆಡೆ ವರುಣ ಇಂದು ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಬಳ್ಳಾರಿ, ಬೀದರ್ ಒಳಗೊಂಡಂತೆ ದಕ್ಷಿಣ ಒಳನಾಡಿನಲ್ಲಿ, ಮಲೆನಾಡು, ಕರಾವಳಿಯ ಕೆಲವೆಡೆ 4-5 ದಿನಗಳ ಕಾಲ ಭಾರಿ ಹಾಗೂ ಸಾಧಾರಣ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ವರುಣ ತಂಪೆರದಿದ್ದಾನೆ.ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದ ಹಲವೆಡೆ ವರುಣ ಇಂದು ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಇಂದೂ ಉತ್ತರ, ದಕ್ಷಿಣ ಕರ್ನಾಟಕ, ಸೇರಿದಂತೆ ಕರಾವಳಿಯಲ್ಲಿ ಮಳೆಯ ಸಿಂಚನವಾಗಿದೆ. 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಿಡಿಲು ,ಗುಡುಗು ಸಮೇತ ಮಳೆ ಸುರಿದಿದೆ. ಮತದಾನದ ದಿನವೂ ಧಾರಕಾರವಾಗಿ ಮಳೆ ಸುರಿಯಲಿದ್ದು, ಮಧ್ಯಹ್ನಾದ ಹೊತ್ತಿಗೆ ವೋಟಿಂಗ್ ಮುಗಿಸಿದ್ರೆ ಉತ್ತಮ ಎಂದು ನೈಸರ್ಗಿಕ ವಿಕೋಪ ಸಂಸ್ಥೆಯ ಅಧಿಕಾರಿ ಶ್ರೀನಿವಾಸ ರೆಡ್ಡಿ ಸುದ್ದಿವಿಗೆ ತಿಳಿಸಿದ್ರು

ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದ ಹಲವೆಡೆ ವರುಣ ಇಂದು ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಇಂದು ಸಂಜೆ ಮತ್ತು ರಾತ್ರಿ ಬೆಳಗಾವಿ, ಗದಗ, ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಇನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾರಿ ಮಳೆಯಾಗಿದೆ. ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಮನೆಯ ಮೇಲ್ಛಾವಣಿ ಹಾರಿಹೋಗಿವೆ. ವಿದ್ಯುತ್ ಕಂಬಗಳು ನೆಲಕಚ್ಚಿವೆ. ಮನೆ ಮೇಲೆ ಕಂಬ ಬಿದ್ದರೂ ಅದೃಷ್ಟವಶಾತ್ 2 ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿವೆ. ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನು ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇನ್ನು ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗ್ತಿದೆ.. ಚಿಂಚೋಳಿ ತಾಲೂಕಿನ ಐನಾಪುರ ಹೋಬಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗ್ತಿದೆ.. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಳೆ ಬಿಸಿಲಿನ ಧಗೆಯಿಂದ ಕಂಗಾಲಾಗಿದ್ದ ಜನತೆ ಹರ್ಷ ತಂದಿದೆ..

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕಡೆ ಗುಡುಗು ಸಮೇತ ಮಳೆಯಾಗ್ತಿದೆ.. ಮತ್ತೊಂದೆಡೆ ಉತ್ತರಕನ್ನಡ ಶಿರಸಿಯಲ್ಲಿ ಮಳೆಯ ಆರ್ಭಟಕ್ಕೆ ರೈತರೊಬ್ಬ ತೋಟದಲ್ಲಿ ಬೆಳೆದಿದ್ದ ಬಾಳೆಗಿಡಗಳು ಸಂಪೂರ್ಣ ನೆಲಕಚ್ಚಿದೆ.. ಅಲ್ಲದೆ ಭದ್ರಾವತಿ, ಶಿವಮೊಗ್ಗ ನಗರ, ತೀರ್ಥಹಳ್ಳಿಯಲ್ಲಿ ವರುಣನ ಅಬ್ಬರಿಸಿದ್ದಾನೆ. ಜಿಟಿಜಿಟಿ ಮಳೆಗೆ ರಸ್ತೆಗಳಲ್ಲಿ ಓಡಾಡುವ ಜನರಿಗೆ ಕಿರಕಿರಿ ಉಂಟಾಗಿದೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಬಳಿಯ ಚೆಕ್ ಪೋಸ್ಟ್ ಮಳೆಯ ರಭಸಕ್ಕೆ ಹಾರಿಹೋಗಿದೆ. ಅಲ್ಲದೆ ಹಾಕಲಾಗಿದ್ದ ಬ್ಯಾರಿಕೇಡ್ ಭಾರಿ ಮಳೆಗೆ ಉರುಳಿಬಿದಿದ್ದಾವೆ. ಗಾಂಧಿನಗರದ ಕೋಟೆ ರಸ್ತೆ ಜಲಾವೃತ್ತವಾಗಿದ್ದರಿಂದ ವಾಹನ ಸವಾರರ ಪರದಾಟವಾಗಿತ್ತು. ಅಲ್ಲದೆ ಪೆಟ್ರೋಲ್ ಬಂಕ್ ಗೂ ನುಗ್ಗಿದ ನೀರು ಅವಾಂತರ ಸೃಷ್ಠಿಸಿತು.ಇನ್ನೂ ಸಿಲಿಕಾನ್ ಸಿಟಿಗೂ ವರುಣ ತಂಪರೆದಿದ್ದಾನೆ.ಶಾಂತಿನಗರ, ಡಬಲ್ ರೋಡ್, ಕೋರಮಂಗಲ, ಕಾರ್ಪೊರೇಷನ್, ಯಶಂತಪುರ, ಶಿವಾಜಿನಗರ ಒಳಗೊಂಡಂತೆ ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ರಸ್ತೆ ತುಂಬೆಲ್ಲಾ ನೀರು ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಪರಿಣಾಮ ಟ್ರಾಫಿಕ್ ಜಾಮ್, ಜನ ಪ್ರಯಾಣ ಮಾಡಲು ಸಾಧ್ಯ ವಾಗದೆ ಬಸ್ ನಿಲ್ದಾಣ ಮತ್ತಿತರೆಡೆ ಆಶ್ರಯ ಪಡೆಯುವಂತಾಯಿತು.
ಒಟ್ಟಿನಲ್ಲಿ ಮುಂಗಾರು ಆರಂಭಕ್ಕೂ ಮುನ್ನ ವರುಣ ಎಲ್ಲೆಡೆ ಅಬ್ಬರಿಸಿದ್ದು, ಜನ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಕೃಷಿ ಚಟುವಟಿಕೆ ಇನ್ನಮೇಲೆ ಗರಿಗೆದರಿಕೊಳ್ಳಲಿವೆ.

ಬ್ಯೂರೋ ರಿಪೋರ್ಟ್ ಸುದ್ದಿಟಿವಿ

0

Leave a Reply

Your email address will not be published. Required fields are marked *