ಪ್ರಸಿದ್ಧ ಕಡ್ಲೆಕಾಯಿ ಪರಿಷೆ…

ಬೆಂಗಳೂರಿನಲ್ಲಿ ಚಳಿ ಆರಂಭವಾಗಿದೆ. ಈ ಚಳಿ ನಡುವೆಯೂ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ನಡೆಯುತ್ತಿದೆ. ಇಂದು ಪರಿಷೆಗೆ ಚಾಲನೆ ದೊರೆಯಲಿದೆ. ಅಲ್ಲದೇ ಜಾತ್ರೆ ಪ್ರಯುಕ್ತ ಹತ್ತಾರು ಅಂಗಡಿಗಳು ರಸ್ತೆಯ ಇಕ್ಕೆಲಗಳಲ್ಲಿ ಬಿಡಾರ ಹೂಡಿದೆ.ಕಾರ್ತಿಕ ಮಾಸದ ಚುಮು ಚುಮು ಚಳಿಯೊಂದಿಗೆ ಬೆಂಗಳೂರಿನ ಬಸವನಗುಡಿ ಇಂದಿನ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸಾಕ್ಷಿಯಾಗಲಿದೆ. ದೊಡ್ಡ ಬಸವಣ್ಣ ದೇವಸ್ಥಾನದ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದೆ. ಎಂದಿನಂತೆಯೇ ಈ ಬಾರಿಯೂ ಸಹ ಕಾರ್ತಿಕ ಮಾಸದ ಕೊನೆಯ ವಾರದಲ್ಲಿ ಜಾತ್ರೆ ನಡೆಯುತ್ತಿದ್ದು, ಮುಖ್ಯ ಉತ್ಸವ ಇಂದು ನಡೆಯಲಿದೆ.

ವಾರಾಂತ್ಯದ ನಂತರ ಈ ವರ್ಷ ಬಸವನಗುಡಿ ಕಡ್ಲೆಕಾಯಿ ಪರಿಷೆ ನಡೆಯುವ ಹಿನ್ನೆಲೆ ನಾಲ್ಕು ದಿನ ಮುನ್ನವೇ ಪರಿಷೆಯ ವಾತಾವರಣ ನಗರದಲ್ಲಿ ಗೋಚರಿಸುತ್ತಿದೆ. ಬಸವನಗುಡಿ ಮುಖ್ಯರಸ್ತೆಯ ಗಣೇಶ ದೇವಸ್ಥಾನ ಎದುರು, ಅಕ್ಕಪಕ್ಕದಲ್ಲಿ ಮಾತ್ರವಲ್ಲ, ಗಾಂಧಿ ಬಜಾರ್‌ನಿಂದ ಬಸವನಗುಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಅದಾಗಲೇ ನೂರಾರು ಅಂಗಡಿಗಳು ತಲೆ ಎತ್ತಿವೆ.ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಮಾಗಡಿ, ಮಂಡ್ಯ, ಮೈಸೂರು, ಚಿಂತಾಮಣಿ, ತುಮಕೂರು, ಕುಣಿಗಲ್ ಸೇರಿದಂತೆ ನೆರೆಯ ಆಂಧ್ರ ಪ್ರದೇಶದಿಂದಲೂ ವರ್ತಕರು ಬಂದು ಕಡ್ಲೆಕಾಯಿ ಮಾರುತ್ತಿದ್ದಾರೆ. ಉಳಿದ ವಸ್ತುಗಳ ವ್ಯಾಪಾರಿಗಳು ಬೇರೆ ಬೇರೆ ರಾಜ್ಯದಿಂದಲೂ ಆಗಮಿಸಿದ್ದಾರೆ.

ಇನ್ನು ಮಿಠಾಯಿ, ಫ್ಯಾನ್ಸಿ ವಸ್ತುಗಳು, ಭಾವಚಿತ್ರಗಳು, ಕಸೂತಿ ಮಾಡಿದ ಬುಟ್ಟಿ, ಗೃಹ ಬಳಕೆ ವಸ್ತು, ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಮಾಲೆಗಳು, ಹೂಗುಚ್ಛ, ಟೆರಾಕೋಟ ವಸ್ತುಗಳು ಸೇರಿದಂತೆ ಅದಾಗಲೇ 50ಕ್ಕೂ ಹೆಚ್ಚು ಅಂಗಡಿಗಳು ಬಸವನಗುಡಿ ದೊಡ್ಡ ಬಸವಣ್ಣ ದೇವಸ್ಥಾನ ಎದುರು ಅಕ್ಕಪಕ್ಕದ ರಸ್ತೆಗಳಲ್ಲಿ ಅದಾಗಲೇ ಅಂಗಡಿಗಳು ಬಿಡಾರ ಹೂಡಿವೆ.ಒಟ್ನಲ್ಲಿ ಬೆಂಗಳೂರು ಐಟಿ ಸಿಟಿಯಾಗಿ ಬೆಳೆದ್ರೂ ಗ್ರಾಮೀಣ ಸೊಗಡನ್ನ ಕಳೆದುಕೊಂಡಿಲ್ಲ ಅನ್ನೋದಕ್ಕೆ ಈ ಪರಿಷೆಯೇ ಸಾಕ್ಷಿ.

ಬ್ಯೂರೋ ರಿಪೋರ್ಟ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *