ಚಿತ್ರ ಸಂತೆಗೆ ಹರಿದು ಬಂತು ಜನಸಾಗರ…

ಕರ್ನಾಟಕ ಚಿತ್ರಕಲಾ ಪರಿಷತ್​ ನಡೆಸಿದ ಚಿತ್ರಸಂತೆಯಲ್ಲಿ ಈ ಬಾರಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನ್ರು ಭೇಟಿ ದಾಖಲೆ ನಿರ್ಮಿಸಿದ್ದಾರೆ. ಮೂರುವರೆ ಕೋಟಿ ಮೌಲ್ಯದ ಕಲಾಕೃತಿಗಳು ಮಾರಾಟವಾಗಿವೆ. ಆದ್ರೆ, ಜಿಎಸ್​ಟಿ ಬಿಸಿ ಸಣ್ಣ ಕಲಾವಿದ್ರನ್ನೂ ಬಿಡ್ಲಿಲ್ಲ.ಮನೆಗೊಂದು ಕಲಾಕೃತಿ ಅನ್ನೋ ಹಿನ್ನೆಲೆಯಲ್ಲಿ 15 ವರ್ಷದ ಹಿಂದೆ ಚಿತ್ರಸಂತೆ ಆರಂಭಿಸಲಾಗಿತ್ತು. ಈಗ ದಿನಕ್ಕೆ ಲಕ್ಷಾಂತರ ಜನ ಭಾಗವಹಿಸೋ ಸಂತೆಯಾಗಿ ಮಾರ್ಪಟ್ಟಿದೆ. 16 ರಾಜ್ಯಗಳಿಂದ 2 ಸಾವಿರ ಕಲಾವಿದ್ರು ಬಂದಿದ್ದರು. ಕಳೆದ ವರ್ಷ ಸುಮಾರು 3 ಲಕ್ಷ ಜನ ಬಂದಿದ್ದರು. ಮೊಬೈಲ್ ವ್ಯಾಲೆಟ್​, ಪೇಟಿಎಂ, ಎಟಿಎಂ ಮೂಲಕ ಖರೀದಿ ವಹಿವಾಟಿನ ಮಾಹಿತಿ ಮಾತ್ರ ದೊರೆತಿದ್ದು, ನಗದು ವಹಿವಾಟಿನ ಮಾಹಿತಿಯಿಂದ ಇನ್ನೂ ಹೆಚ್ಚಿನ ವಹಿವಾಟು ನಡೆದಿದೆ ಅಂತಿದೆ ಚಿತ್ರಕಲಾ ಪರಿಷತ್ತು.

ಇನ್ನು 15 ವರ್ಷದ ಹಿಂದೆ ಆರಂಭಗೊಂಡ ಈ ಚಿತ್ರ ಸಂತೆಗೆ ಪ್ರೇರಣೆ ಪ್ಯಾರಿಸ್​ನ ಚಿತ್ರ ಸಂತೆ. ಚಿತ್ರಸಂತೆ 2003ರಲ್ಲೇ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡಿತ್ತಿತ್ತು. ವಿದ್ಯಾರ್ಥಿಗಳು ಚಿತ್ರಗಳನ್ನ ಅನಾರಣಗೊಳಿಸ್ತಿದ್ರು. ಅದನ್ನ, ನಂಜುಂಡಸಿರಿ ಅಂತ ಕರಿತಿದ್ರು. ಪಶ್ಚಿಮ ಬಂಗಾಳದ ಶಾಂತಿ ನಿಕೇತನದ ನಂದನ್​ಮೇಳ ಮಾದರಿಯಲ್ಲಿ ನಂಜುಂಡ ಸಿರಿ ನಡೆಯುತ್ತಿತ್ತು. ಆದ್ರೆ, ಅಲ್ಲಿ ಜನ ಸಾಮಾನ್ಯರು ಭಾಗವಹಿಸಲು ಅವಕಾಶವಿರಲಿಲ್ಲ. ಹೆಚ್ಚಿಗೆ ಜನಪ್ರಿಯತೆಯನ್ನೂ ಕಂಡಿರಲಿಲ್ಲ. ಅಪ್ಪಾಜಯ್ಯ ಅವ್ರು 2002ರಲ್ಲಿ ಪ್ಯಾರಿಸ್​ ಭೇಟಿ ನೀಡಿದಾಗ ಅಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಸ್ತೆಯಲ್ಲೇ ಚಿತ್ರಸಂತ ನಡಿಯುತ್ತಿದ್ದನ್ನ ಚಿತ್ರಕಲಾ ಪರಿಷತ್​ ಗಮನಕ್ಕೆ ತಂದಿದ್ರಂತೆ.

ಈ ಚಿತ್ರಸಂತೆ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ಹೊಸ ಕಲಾವಿದರಿಗೆ ಗ್ಯಾಲರಿಯಲ್ಲಿ ಸಂತೆ ಏರ್ಪಡಿಸೋದು ಕಷ್ಟ. ಹಾಗಾಗಿ, ಕಲಾವಿದರು ಚಿತ್ರಸಂತೆಗೆ ಕಾಯ್ತಾ ಇರ್ತಾರೆ. ಚಿತ್ರಸಂತೆಯಲ್ಲಿ ಚಿತ್ರಕೊಳ್ಳಲು ಕಲಾರಸಿಕರೂ ಕಾಯ್ತಿರ್ತಾರೆ. ಹಿಂದೆ ಕುಮಾರಕೃಪಾ ರಸ್ತೆ, ಅಕ್ಕಪಕ್ಕದ ರಸ್ತೆಗಳು ಹಾಗೂ ಗಾಲ್ಫ್​ ಕ್ಲಬ್​ ಬಳಿ ಚಿತ್ರ ಸಂತೆ ಮಾಡಲಾಗ್ತಿತ್ತು. ಕಳೆದ ವರ್ಷ 1200 ಮಳಿಗೆಗಳಿತ್ತು. ಈ ಬಾರಿ 1400 ಮಳಿಗೆಗಳನ್ನ ಹಾಕಲಾಗಿದೆ.ಆರಂಭದಲ್ಲಿ ಚಿತ್ರಸಂತೆ ಆರಂಭಿಸಿದಾಗ ಕಲಾವಿದರನ್ನ ಬೀದಿಗೆ ತಂದು ಬಿಟ್ರಲ್ಲಾ ಅನ್ನೋ ಟೀಕೆಗಳೂ ಕೇಳಿ ಬಂದಿದ್ವಂತೆ. ಆದ್ರೆ, ಇಂದು ಒಂದು ಮಳಿಗೆಯಲ್ಲಿ ಕನಿಷ್ಠ 60 ಕಲಾಕೃತಿಗಳು ಮಾರಾಟವಾದ್ರೂ ಜನ್ರಿಗೆ ಏಕಾಏಕಿ ಲಕ್ಷಾಂತರ ಕಲಾಕೃತಿಗಳನ್ನ ನೋಡುವ ಅವಕಾಶ ಕಲ್ಪಿಸಲಾಗಿತ್ತು.

 ಶಶಿರೇಖಾ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *