ಸಭೆಯಲ್ಲಿ ಬೇಳೂರು ಗೋಪಾಲಕೃಷ್ಣ ಕಣ್ಣೀರು….

ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ತಮ್ಮ ಅಭಿಮಾನಿಗಳ ಸಭೆ ನಡೆಸಿದ್ದು, ಈ ವೇಳೆ, ತ್ಮ ಬೆಂಬಲಿಗರನ್ನು ಕಂಡು ಬೇಳೂರು ಗೋಪಾಲಕೃಷ್ಣ ಕಣ್ಣೀರು ಹಾಕಿದ್ರು. ಸಾಗರದ ಬಿ.ಹೆಚ್.ರಸ್ತೆಯ ರಾಘವೇಶ್ವರ ಭವನದಲ್ಲಿ ಸಭೆ ನಡೆಯಿತು. ಈ ವೇಳೆ, 500ಕ್ಕೂ ಹೆಚ್ಚು ಅಭಿಮಾನಿಗಳು ಬಿ.ಹೆಚ್.ರಸ್ತೆಯಿಂದ ಮೆರವಣಿಗೆಯ ಮೂಲಕ ಬೇಳೂರು ಗೋಪಾಲಕೃಷ್ಣ ಅವರನ್ನು ಕರೆತಂದ್ರು. ವೇದಿಕೆಗೆ ಬರುತ್ತಿದ್ದಂತೆಯೇ ತಮ್ಮವರನ್ನು ಕಂಡ ಬೇಳೂರು ಕಣ್ಣಿರು ಹಾಕಿದರು. ಸಭೆಯಲ್ಲಿ ಹರತಾಳು ಹಾಲಪ್ಪ ವಿರುದ್ದ ಘೋಷಣೆಗಳನ್ನು ಹಾಕಲಾಯಿತು. ಸಭೆಯಲ್ಲಿ ಜಿ.ಪಂ ಸದಸ್ಯ ಮಂಜುನಾಥ್, ಜಿಲ್ಲಾ ಬಿಜೆಪಿಯ ಶರಾವತಿ ಸಿ. ರಾವ್, ಟೀಕಪ್ಪ, ಭೀಮನೇರಿ ಶಿವಪ್ಪ, ನಗರಸಭ ಸದಸ್ಯರಾದ ಸಂತೋಷ್ ಶೇಟ್, ಶ್ರೀನಿವಾಸ್, ಸೇರಿದಂತೆ ಇತರೆ ಬಿಜೆಪಿ ಮುಖಂಡರು ಹಾಜರಿದ್ದರು. ಇಂದು ಅಭಿಮಾನಿಗಳು ತೆಗೆದು ಕೊಳ್ಳುವ ನಿರ್ಧಾರದ ಮೇಲೆ ಬೇಳೂರು ಗೋಪಾಲಕೃಷ್ಣ ಪಕ್ಷೇತರರಾಗಿ ಸ್ಪರ್ಧಿಸುವ ಇಲ್ಲ ಜೆಡಿಎಸ್ ಪಕ್ಷ ಸೇರುವ ತೀರ್ಮಾನವಾಗಲಿದೆ. ಬೇಳೂರು ಗೋಪಾಲಕೃಷ್ಣ ರನ್ನು ಮನವೊಲಿಸು ಕಾರ್ಯ ಬಿಜೆಪಿಯ ಹಿರಿಯ ನಾಯಕರು ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

0

Leave a Reply

Your email address will not be published. Required fields are marked *