ಕಲಾಪದಲ್ಲಿ ಪ್ರತಿಧ್ವನಿಸುತ್ತಾ ಇಂಧನ ಇಲಾಖೆ ಹಗರಣ..?

ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿಯ ಮುಕುಟದಂತಿರೋ ಸುವರ್ಣಸೌಧ ಸಜ್ಜಾಗಿದೆ. ಇಂದಿನಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹಲವು ಮಹತ್ವದ ವಿಧೇಯಕಗಳು ಮಂಡನೆಯಾಗಲಿವೆ. ಚುನಾವಣೆ ಸನಿಹದಲ್ಲೇ ಇರುವ ಕಾರಣ, ಈ ಬಾರಿ ಬೆಳಗಾವಿ ಅಧಿವೇಶನ, ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ದೊಡ್ಡ ವಾಕ್ಸಮರಕ್ಕೆ ಸಾಕ್ಷಿಯಾಗೋದರಲ್ಲಿ ಅನುಮಾನ ಇಲ್ಲ.ಕುಂದಾನಗರಿ ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ವಿಧಾನಸಭೆ ಚುನಾವಣೆಯ ಹತ್ತಿರದಲ್ಲಿರುವಾಗಲೇ, ಚಳಿಗಾಲದ ಅಧಿವೇಶನ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ‌. ನಾಳೆಯಿಂದ ನವೆಂಬರ್ 24ರವರೆಗೆ ಒಟ್ಟು 10 ದಿನಗಳ ಕಾಲ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದೆ. ಹಲವು ಮಹತ್ವದ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಹಲವು ಮಹತ್ವದ ವಿಧೇಯಕಗಳು ಕೂಡಾ ಮಂಡನೆಯಾಗಲಿವೆ. ಆಡಳಿತ ಪಕ್ಷ ಕಾಂಗ್ರೆಸ್ ಹಣೆಯಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯತಂತ್ರ ರೂಪಿಸಿದ್ರೆ, ಪ್ರತಿಪಕ್ಷಗಳಿಗೆ ಉತ್ತರ ನೀಡಲು ಸರ್ಕಾರ ಕೂಡ ಸಜ್ಜಾಗಿದೆ.

ಇನ್ನು ಬಿಜೆಪಿ ಕೂಡಾ ಡಿ.ವೈ.ಎಸ್‌.ಪಿ‌ ಗಣಪತಿ ಆತ್ಮಹತ್ಯೆ ಪ್ರಕರಣ, ಐ.ಟಿ ರೈಡ್ ವಿಚಾರ, ಟಿಪ್ಪು ಜಯಂತಿ ಆಚರಣೆ ವಿಚಾರ, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳು, ಅತಿವೃಷ್ಟಿಯಿಂದಾದ ಬೆಳೆಹಾನಿ, ಇತ್ಯಾದಿ ವಿಚಾರಗಳ ಬಗ್ಗೆ ಸರ್ಕಾರದ ವಿರುದ್ದ ವಾಕ್ಸಮರ ನಡೆಸಲು ತಯಾರಾಗಿದೆ.ಇನ್ನು ಅಧಿವೇಶನದಲ್ಲಿ ಮಹತ್ವದ ವಿಧೇಯಕಗಳು ಮಂಡನೆಯಾಗಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಲಿವೆ.ಪ್ರಮುಖವಾಗಿ ಮಂಡನೆ ಮತ್ತು ಅಂಗೀಕಾರಕ್ಕೆ ಬಾಕಿ ಇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ಮೌಡ್ಯ ನಿಷೇಧ ವಿಧೇಯಕ, ಮುಂಬಡ್ತಿ ಮೀಸಲಾತಿ ಮುಂದುವರೆಸುವ ಸಂಬಂಧ ತಿದ್ದುಪಡಿ ವಿಧೇಯಕಗಳ ಮಂಡನೆಯಾಗಲಿವೆ. ಅಲ್ಲದೆ ಬೆಂಗಳೂರು ಕೆರೆಗಳ ಒತ್ತುವರಿ ಕುರಿತು ರಚಿಸಲಾಗಿದ್ದ ಸದನ ಸಮಿತಿ, ಇಂಧನ ಇಲಾಖೆ ಅಕ್ರಮ ಸದನ ಸಮಿತಿ ವರದಿಗಳು ಸೇರಿ ಹಲವು ವರದಿಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ.ಆದರೆ ಈ ಚಳಿಗಾಲದ ಅಧಿವೇಶನದಲ್ಲಿ ಶಾಸಕರ ಕೋರಂ ಸಮಸ್ಯೆ ಕಾಣಿಸಿಕೊಳ್ಳೋ ಸಾಧ್ಯತೆ ಇದೆ‌. ನವೆಂಬರ್ 16 ರಿಂದ 22 ರವರೆಗೆ ಬೆಳಗಾವಿಯಲ್ಲೇ ಬಿಜೆಪಿ ಪರಿವರ್ತನಾ ಯಾತ್ರೆ ಸಾಗಲಿದೆ. ಅಲ್ಲದೆ ಜೆಡಿಎಸ್ ನ ವಿಕಾಸ ಯಾತ್ರೆ ಕೂಡಾ ಈ ವಾರದಲ್ಲೇ ಬೆಳಗಾವಿಯಲ್ಲೇ ಬರಲಿದೆ. ಹೀಗಾಗಿ ಹಲವು ಪ್ರತಿಪಕ್ಷ ಸದಸ್ಯರು ಉಭಯ ಕಲಾಪದಲ್ಲಿ ಗೈರಾಗುವ ಸಾಧ್ಯತೆಗಳಿವೆ.

ಪೊಲಿಟಿಕಲ್ ಬ್ಯುರೊ ಸುದ್ದಿ ಟಿವಿ

0

Leave a Reply

Your email address will not be published. Required fields are marked *