ಬೆಳಗಾವಿಯ ಸಮಸ್ಯೆಯಿಂದಾಗಿ ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ

ಸಮ್ಮಿಶ್ರ ಸರ್ಕಾರಕ್ಕೆ ಒಂದಾದ ಮೇಲೊಂದರಂತೆ ತಲೆಬಿಸಿ ಹೆಚ್ಚುತ್ತಲೇ ಇದೆ. ಸಧ್ಯ ಕಾಂಗ್ರೆಸ್ ನಲ್ಲಿ ಬೆಳಗಾವಿ ಬೇಗುದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬೆಳಗಾವಿಯ ಸಮಸ್ಯೆಯಿಂದಾಗಿ ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನಗೊಂಡಿದ್ದು, ಪಕ್ಷದೊಳಗೆ ಪರಿಹರಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮೈತ್ರಿ ಕಷ್ಟವಾದ್ರೆ ಸ್ಪಷ್ಟವಾಗಿ ಹೇಳ್ಬೀಡಿ, ನಮ್ಮ ದಾರಿ ನಾವು ನೋಡ್ಕೋತೀವಿ. ಬಿಜೆಪಿ ಸಹಕಾರ ಎದುರು ನೋಡುತ್ತಿದೆ ಎಂದು ಜೆಡಿಎಸ್ ವರಿಷ್ಟ ದೇವೇಗೌಡರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಜಾರಕಿಹೊಳಿ ಸದೋಹರರ ಬಗ್ಗೆ ತಮಗೆ ಯಾಕೆ ಕೇಳುತ್ತೀರಿ, ಅವರನ್ನೇ ಕೇಳಿ ಎಂದು ಮಾಧ್ಯಮಗಳ ವಿರುದ್ಧ ಜೆಡಿಎಸ್ ವರಿಷ್ಟ ದೇವೇಗೌಡರು ಹರಿಹಾಯ್ದಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಕೇಳಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಹತ್ವದ ವಿಷಯಗಳಿವೆ. ಅದನ್ನು ಬಿಟ್ಟು ಕುಮಾರಸ್ವಾಮಿ ಸರ್ಕಾರ ಯಾವಾಗ ಹೋದೀತು ಅಂತ ಲೆಕ್ಕಾಚಾರ ಮಾಡ್ತಿದಿರಿ ಎಂದು ಕಿಡಿಕಾರಿದರು.

0

Leave a Reply

Your email address will not be published. Required fields are marked *