ಸೊಳ್ಳೆಗಳ ನಿಯಂತ್ರಣಕ್ಕೆ ಹಗಲು- ರಾತ್ರಿಯನ್ನೆದೇ ಫಾಗಿಂಗ್​​ನಲ್ಲಿ ​ ಬ್ಯೂಸಿ..

ಮಳೆಗಾಲ ಬಂದ್ರೆ ಸಾಕು ಖುಷಿ ಆಗೋದಕ್ಕಿಂತ ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗಳು ಹರುಡುವ ಭೀತಿಯೇ ಹೆಚ್ಚು.. ಹೀಗಾಗಿಯೇ ಜನ್ರ ಭೀತಿಯನ್ನ ನಿರ್ವಾರಿಸಲು ಬಿಬಿಎಂಪಿಯ ಆರೋಗ್ಯ ಇಲಾಖೆಯು ಫೂಲ್​ ಆಕ್ಟಿವ್​ ಆಗಿದೆ.ಈಗ ಸರ್ವಂ ಡೆಂಗೂ ಮಯಂ ಆಗಿದೆ.. ಎಲ್ಲರ ಬಾಯಲ್ಲೂ ಡೆಂಘೀ ಇವ್ರಿಗೆ ಬಂದಿದೆಯಂತೆ, ಅವ್ರಿಗೆ ಬಂದಿದ್ದಯಂತೆ ಅನ್ನೋ ಮಾತುಗಳೇ ಹೆಚ್ಚಾಗಿ ಕೇಳಿಬರ್ತಿದೆ.. ಇನ್ನು ಡೆಂಘೀ ಎಲ್ಲೆಡೆ ಆವರಿಸಿರೋ ಕಾರಣ, ಪಾಲಿಕೆಯು ಅವುಗಳ ನಿಯಂತ್ರಣಕ್ಕೆ ಮುಂದಾಗಿದೆ.. ಎಲ್ಲ ವಾರ್ಡ್​​ ಗಳಲ್ಲೂ ಹಗಲು- ರಾತ್ರಿಯನ್ನೆದೇ ಫಾಗಿಂಗ್​ ಕೆಲ್ಸದಲ್ಲಿ ಪಾಲಿಕೆ ಸಿಬ್ಬಂದಿ ಫುಲ್​ ಬ್ಯೂಸಿಯಾಗಿದ್ದಾರೆ..

ಪಾಲಿಕೆ ವ್ಯಾಪ್ತಿಯ ಒಟ್ಟು198 ವಾರ್ಡ್​ಗಲ್ಲಿ ಎಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಇರೋತ್ತೋ ಅಲ್ಲಿ ಫಾಗಿಂಗ್​ ಕೆಲಸ ಮಾಡಲಾಗ್ತಿದೆ. ಜೊತೆಗೆ ಸಾರ್ವಜನಿಕರ ಕೆರೆ ಮೇರೆಗೂ ಹೋಗಿ ಫಾಗಿಂಗ್​ ಕೆಲಸ ಮಾಡಲಾಗ್ತಿದೆ.. ಇಷ್ಟೇ ಅಲ್ಲದೇ ಡೆಂಗ್ಯೂ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಗ್ತಿದೆ.ಒಟ್ಟಾರೆ, ಮಳೆಗಾಲ ಅಂದ್ರೆ ಬ್ಯಾಕ್ಟರೀಯಾಗಳು ಆಕ್ಟೀವ್​ ಆಗೋ ಸಮಯ..ಹೀಗಾಗಿ ಅವುಗಳ ಹರಡುವ ಜಾಗದಲ್ಲೇ ನಾಶ ಮಾಡುವ ಕೆಲಸ ಮಾಡ್ತಿದೆ ಪಾಲಿಕೆ..

– ವಿಡಿಯೋ ಜರ್ನಲಿಸ್ಟ್​ ಚೇತನ್​ ಜೊತೆ ದೀಪಾ. ಎಸ್, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *