ಬಿಬಿಎಂಪಿ ಆಸ್ಪತ್ರೆಗಳನ್ನು ಬಲಪಡಿಸಲಾಗ್ತಿದೆ….

ರಾಜ್ಯಾದ್ಯಂತ ಖಾಸಗಿ ವೈದ್ಯರ ಮುಷ್ಕರ ಹಿನ್ನಲೆ ರಾಜಧಾನಿ ಬೆಂಗಳೂರಲ್ಲಿ ಬಿಬಿಎಂಪಿ ಆಸ್ಪತ್ರೆಗಳನ್ನು ಬಲಪಡಿಸಲಾಗ್ತಿದೆ. ಇದಕ್ಕಾಗಿ ಸಾಕಷ್ಟು ಎಚ್ಚರವಹಿಸಿರುವ ಬಿಬಿಎಂಪಿ ನಗರದ ಜನರ ತುರ್ತು ಅವಶ್ಯಕತೆಗಳಿಗಾಗಿ ಮೊಬೈಲ್ ಆಸ್ಪತ್ರೆಗಳನ್ನು ಮಾಡೋದಕ್ಕೆ ತೀರ್ಮಾನಿಸಿದೆ.. ಬೆಂಗಳೂರು ಜನರ ಹಿತರಕ್ಷಣೆ ಮಾಡ್ತಿರೋ ಬಿಬಿಎಂಪಿ ಖಾಸಗಿ ವೈದ್ಯರಿಲ್ಲದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸೋಕೆ ಅಗತ್ಯ ಕ್ರಮ ಕೈಗೊಂಡಿದೆ.. ಈ ಕುರಿತು ವೈದ್ಯರೊಂದಿಗೆ ಮೇಯರ್​ ಸಂಪತ್​ರಾಜ್​ ಇಂದು ಬೆಳಗ್ಗೆ ಸಭೆ ನಡೆಸಿದ್ರು. ಯಾವುದೇ ಕಾರಣಕ್ಕೂ ಅಸ್ವತ್ರೆಯ ಸಿಬ್ಬಂದಿಗೆ ರಜೆ ನೀಡಬಾರದು, 24 ಗಂಟೆ ಅಸ್ವತ್ರೆಯ ಡಾಕ್ಟರ್ ಕೆಲಸ ನಿರ್ವಹಿಸ ಬೇಕು. 01ಎಲ್ಲ ಬಿಬಿಎಂಪಿ ಹೆರಿಗೆ ಅಸ್ವತ್ರೆಯನ್ನು 24 ಗಂಟೆ ತೆರೆದಿಡಬೇಕು, ಹಾಗೇ ಆಸ್ಪತ್ರೆಗೆ ಪೊಲೀಸ್​ ಬದ್ರತೆ ನೀಡಲಾಗುವುದು ಅಂತ ತಿಳಿಸಿದ್ರು.

ಇನ್ನೊಂದೆಡೆ ಬಿಬಿಎಂಪಿಯ ಪ್ರತೀ ವಲಯದಲ್ಲೂ ಮೊಬೈಲ್ ಆಸ್ಪತ್ರೆಗಳನ್ನು ಆರಂಭಿಸುವ ಕುರಿತಾಗಿ ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಯ್ತು… ಪ್ರತಿ ವಲಯದಲ್ಲೂ ಬಿಬಿಎಂಪಿ ವೈದ್ಯರು ಹಾಗೂ ಜನಪ್ರತಿನಿಧಿಗಳ ತಂಡವೊಂದನ್ನು ರಚಿಸಲಾಗುವುದು.. ಆ ವಲಯದಲ್ಲಿ ಎಲ್ಲೇ ತುರ್ತು ಚಿಕಿತ್ಸೆಯ ಅಗತ್ಯ ಕಂಡುಬಂದ್ರೂ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುವುದು. ಅಲ್ಲದೆ 108 ಹಾಗೂ ಬಿಬಿಎಂಪಿ ವಾಹನಗಳನ್ನು ಬಳಸಿ ಚಲಿಸುವ ಆಸ್ಪತ್ರೆ ಹೆಸರಿನಲ್ಲಿ ಜನರಿಗೆ ಸೂಕ್ತ ಚಿಕಿತ್ಸೆಗೆ ಮುಂದಾಗುವ ಕುರಿತು ಸಭೆಯಲ್ಲಿ ಚರ್ಚಿಸಲಾಯ್ತು..

ಒಟ್ಟಿನಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಹಲವೆಡೆ ಸಾರ್ವಜನಿಕರು ಪರದಾಡುತ್ತಿದ್ದಾರೆ.. ಹೀಗಾಗಿ ಸರ್ಕಾರಿ ಮತ್ತು ಬಿಬಿಎಂಪಿ ಆಸ್ಪತ್ರೆಗಳು ಎಚ್ಚೆತ್ತು ಯಾವುದೇ ಸಾವು- ನೋವು ಸಂಭವಿಸದಂತೆ, ಉತ್ತಮ ಚಿಕಿತ್ಸೆ ನೀಡಲು ಕ್ರಮಕೈಗೊಂಡಿದೆ.

ಸೌಮ್ಯಶ್ರೀ ಮಾರ್ನಾಡ್, ಮೆಟ್ರೋ ಬ್ಯೂರೋ, ಸುದ್ದಿಟಿವಿ,

0

Leave a Reply

Your email address will not be published. Required fields are marked *