ನಾಳೆ ನಿಮ್ಮ ಮನೆಗೆ ಬರಲ್ಲ ‘ಕಾವೇರಿ’!

ಸಿಲಿಕಾನ್ ಸಿಲಿಕಾನ್ ಸಿಟಿ ಜನರೇ ಎಚ್ಚರ.. ನೀವು ಇವತ್ತೇ ನೀರು ಶೇಖರಿಸಿಟ್ಟುಕೊಂಡಿದ್ರೇ ಒಳ್ಳೇಯದು. ಇಲ್ಲಾಂದ್ರೆ ನಾಳೆ ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ನಾಳೆ ರಾಜಧಾನಿಯ ಅರ್ಧ ಭಾಗಕ್ಕೆ ಕಾವೇರಿ ನೀರು ಬರಲ್ಲ. ಯಾಕಂದ್ರೆ ಈ ಸ್ಟೋರಿ ನೋಡಿ? ನಿಮಗೆ ಗೊತ್ತಾಗುತ್ತೆ.ರಾಜಧಾನಿ ಬೆಂಗಳೂರಿನ ಜನರಿಗೆ ಜಲ ಮಂಡಳಿ ಶಾಕ್ ನೀಡಿದೆ. ನಾಳೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಕಾವೇರಿ ನೀರು ಪೂರೈಕೆ ಆಗುವುದಿಲ್ಲ ಎಂದು ಬೆಂಗಳೂರು ಜಲ ಮಂಡಳಿ ಪ್ರಕಟಣೆ ಹೊರಡಿಸಿದೆ. ಕಾವೇರಿ 1, 2 ಮತ್ತು 3 ನೇ ಹಂತದ ಯೋಜನೆ ಕೊಳವೆ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲಿದೆ. ಪೈಪಿಂಗ್ ಸಿಸ್ಟಂ ಬಹಳ ಹಳೇದಾಗಿರೋ ಹಿನ್ನೆಲೆಯಲ್ಲಿ ಪಂಪಿಂಗ್ ಕಾರ್ಯ ಸ್ಥಗಿತ ಗೊಳಿಸಿ ಬದಲಾವಣೆ ಮಾಡಲಿದ್ದಾರೆ.

ನಾಳೆ ಅರ್ಧ ಬೆಂಗಳೂರಿಗೆ ಅಂದ್ರೆ, ಹಳೇ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ತುರ್ತು ಕಾಮಗಾರಿ ನಡೆಯಲಿದ್ದು, ನಂತರ ಮತ್ತೆ ನೀರನ್ನು ಬಿಡಲಾಗುವುದು ಅಂತಾ ಜಲಮಂಡಳಿ ಎಂಜಿನಿಯರ್ ಪಿ.ಎನ್. ರವೀಂದ್ರ ಮಾಹಿತಿ ನೀಡಿದ್ರು.

ಈ ಪ್ರದೇಶಕ್ಕೆ ‘ಕಾವೇರಿ’ ಬರಲ್ಲ?

– ಜಯನಗರ, ಜೆಪಿನಗರ, ಬಸವನಗುಡಿ ಬಿಟಿಎಂ ಲೇಔಟ್
– ಮಲ್ಲೇಶ್ವರಂ, ವಿಜಯನಗರ, ಆರ್.ಟಿನಗರ, ಮಡಿವಾಳ,
– ಪದ್ಮನಾಭನಗರ, ಬನಶಂಕರಿ 2-3 ನೇ ಹಂತ, ಚಾಮರಾಜಪೇಟೆ
– ಕುಮಾರಸ್ವಾಮಿ ಲೇಔಟ್, ಆಡುಗೋಡಿ, ಜಾನ್ಸನ್‌ ಮಾರ್ಕೆಟ್
– ಮೈಸೂರು ರಸ್ತೆ, ಬಾಪೂಜಿನಗರ, ಶ್ರೀರಾಮಪುರ, ನೀಲಸಂದ್ರ
– ಕೆ.ಆರ್.ಮಾರ್ಕೆಟ್, ಯಶವಂತಪುರ, ಹೆಬ್ಬಾಳ, ಶಿವಾಜಿನಗರ
– ಸದಾಶಿವನಗರ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ.
ನಾಳೆ ಬೆಂಗಳೂರಿನ ಅರ್ಧ ಭಾಗದಲ್ಲಿ ನೀರು ಪೂರೈಕೆ ಸ್ಥಗಿತವಾಗ್ತಿರೋ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಸಮಸ್ಯೆಯಾಗಲಿದೆ. ಹೀಗಾಗಿ, ಇವತ್ತೇ ನೀರು ಶೇಖರಿಸಿಟ್ಟುಕೊಂಡಿದ್ರೇ ಬಚಾವ್. ಇಲ್ಲಾಂದ್ರೆ, ನಾಳೆ ನೀರಿಗಾಗಿ ಪರದಾಡೋದಂತೂ ಗ್ಯಾರಂಟಿ.

ಸುಬ್ರಹ್ಮಣ್ಯ ಎಸ್ ಹಂಡಿಗೆ ಸುದ್ದಿ ಟಿವಿ ಬೆಂಗಳೂರು

0

Leave a Reply

Your email address will not be published. Required fields are marked *