ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟಿದೆ ದೇಸಿ ಫ್ರೂಟ್ಸ್…

ಬೇಸಿಗೆ ಆರಂಭವಾಗಿದ್ದೇ ತಡ, ಒಂದರ ನಂತರ ಮತ್ತೊಂದು ಹಳ್ಳಿ ಹಣ್ಣುಗಳು ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡ್ತಿವೆ. ಈ ಬಾರಿ ಎಲ್ಲೆಡೆ ಬೆಳೆ ಹಣ್ಣುಗಳು ಕಡಿಮೆ ಇದ್ದು, ಹಣ್ಣುಗಳ ರೇಟ್ ಭರ್ಜರಿಯಾಗೇ ಇದೆ. ಹಾಗಾದ್ರೆ ಸಿಲಿಕಾನ್ ಸಿಟಿಯಲ್ಲಿ ಸದ್ಯ ಯಾವೆಲ್ಲಾ ಹೊಸ ಹಣ್ಣುಗಳು ಬಂದಿವೆ.ಸೇಬು, ಕಿತ್ತಳೆ, ಮೂಸಂಬಿ ಸದಾ ಟ್ರೆಂಡ್ ಅಲ್ಲಿರೋ ಹಣ್ಣುಗಳು.. ಆದ್ರೆ ಬೇಸಿಗೆಯಲ್ಲಿ ಮಾತ್ರ ಸವಿಯೋಕೇ ಸಿಗೋದು ನಮ್ಮ ದೇಸಿ ಫ್ರೂಟ್ಸ್ ಅಂದ್ರೆ ಕಾಡು ಹಣ್ಣುಗಳು. ಹಳ್ಳಿಗಳಲ್ಲಿ ಯತೇಚ್ಛವಾಗಿ ಸಿಗೋ ಈ ಹಣ್ಣುಗಳು ಇದೀಗ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡ್ತಿದ್ದು, ಒಂದಕ್ಕಿಂತ ಒಂದರ ಸ್ವಲ್ಪ ಮಟ್ಟಿಗೆ ದುಬಾರಿ…

ದೇಸಿ ಹಣ್ಣುಗಳ ರೇಟ್ (ಕೆ.ಜಿಗೆ)

ಲೀಚಿ – 300ರೂ
ಮ್ಯಾಂಗೋ – 200-300ರೂ
ಜಾಂ ಫ್ರೂಟ್ – 30 ರೂ
ಪನ್ನೀರ್ – 400ರೂ
ತಾಟೀಲಿಂಗು(ಒಂದು ಕಾಯಿಗೆ) – 30 ರೂ
ಅಂಜೂರ – 100 ರೂ
ಚೇರಿ-200

ಸದ್ಯ ಸಿಲಿಕಾನ್ ಸಿಟಿಯಲ್ಲಿ ಸೀಸನಲ್ ದೇಸಿ ಹಣ್ಣುಗಳ ಎಂಟ್ರಿ ಆಗ್ತಿದ್ದು, ಲೀಚಿ ಕೆ.ಜಿಗೆ 300ರೂಪಾಯಿ, ಮ್ಯಾಂಗೋ – 200-300ರೂ, ಬಿಯರ್ಸ್ ಹಣ್ಣು – 150 ರೂ,ಬ್ಯಾಲದ ಹಣ್ಣು – 100ರೂ, ನೆಲ್ಲಿಕಾಯಿ – 120 ರೂ, ಜಾಂ ಫ್ರೂಟ್ ಒಂದಕ್ಕೆ 30 ರೂ, ಪನ್ನೀರ್ ಕೆ.ಜಿಗೆ 400ರೂ, ತಾಟೀಲಿಂಗು(ಒಂದು ಕಾಯಿಗೆ) – 30 ರೂ, ಅಂಜೂರ ಕೆ.ಜಿಗೆ 100 ರೂಪಾಯಿ ಬೆಲೆ ಇದೆ. ಹಣ ಎಷ್ಟೇ ಆದ್ರೂ ಸೀಸನ್ ಅಲ್ಲಿ ಬಂದಾಗ ತಿನ್ಲೇ ಬೇಕು ಅನ್ಸುತ್ತೆ. ಹಾಗಾಗಿ ಕೊಂಡುಕೊಳ್ತೀವಿ ಅಂತಾರೆ ಗ್ರಾಹಕರು.ವಾ.ಓ: ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ಬಂದೊಂದೇ ದೇಸಿ ಹಣ್ಣುಗಳ ಎಂಟ್ರಿ ಆಗ್ತಿದ್ದು, ಗ್ರಾಹಕರಲ್ಲಿ ತಿನ್ನೋ ಆಸೆ ಹೆಚ್ಚಿಸಿದ್ರೆ, ವ್ಯಾಪಾರಿಗಳು ಹಣ್ಣುಗಳ ಕೊರತೆ ಎದುರಿಸ್ತಿದ್ದಾರೆ. ಎನೇ ಆಗ್ಲಿ, ವರ್ಷಕ್ಕೊಮ್ಮೆ ಸಿಗೋ ಈ ಹಣ್ಣುಗಳನ್ನು ಸಿಕ್ಕಾಗೊಮ್ಮೆ ಕೊಂಡು ತಿಂದು ಬಾಯಿ ಚಪ್ಪರಿಸಿಬಿಡೋಣ.. ಏನಂತೀರಾ?

ಸುಪ್ರಿಯಾಶರ್ಮಾ ಸುದ್ದಿ ಟಿವಿ ಬೆಂಗಳೂರು….

0

Leave a Reply

Your email address will not be published. Required fields are marked *