ಭಾರತದ ರಾಷ್ಟ್ರಧ್ವಜಕ್ಕೆ ಬಾಂಗ್ಲಾ ಕ್ರಿಕೆಟ್‌ ಅಭಿಮಾನಿಗಳು ಅಪಮಾನ ಮಾಡಿದ್ದಾರೆ….

ಭಾರತದ ರಾಷ್ಟ್ರಧ್ವಜಕ್ಕೆ ಬಾಂಗ್ಲಾ ಕ್ರಿಕೆಟ್‌ ಅಭಿಮಾನಿಗಳು ಅಪಮಾನ ಮಾಡಿದ್ದಾರೆ. ಅವಮಾನ ಮಾಡುವಂತೆ ಫೋಟೋವೊಂದನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಅಪ್ಲೋಡ್​ ಮಾಡಿದ್ದು ಬಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಭಾರತದ ರಾಷ್ಟ್ರಧ್ವಜವನ್ನು ನಾಯಿಯ ದೇಹಕ್ಕೆ ಹೊದಿಸಿದ್ದು, ಬಾಂಗ್ಲಾದೇಶದ ಧ್ವಜವನ್ನು ಹುಲಿಯ ದೇಹದ ಮೇಲೆ ಹೊದಿಸಲಾಗಿದೆ. ಚಿತ್ರದಲ್ಲಿ ನಾಯಿಯನ್ನು ಹುಲಿ ಬೆನ್ನಟ್ಟಿ ಹೋಗುತ್ತಿದ್ದು, ಈ ಚಿತ್ರವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಕಿಡಿಗೇಡಿಗಳು ಈ ರೀತಿಯಾದ ಅಸಭ್ಯ ವರ್ತನೆಗಳು ತೋರಿದ್ದು ಇದೀಗ ಅದೇ ರೀತಿಯ ಫೋಟೋವನ್ನ ತಯಾರಿಸಿ ಮತ್ತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

0

Leave a Reply

Your email address will not be published. Required fields are marked *