ಮಸೀದಿ ಧ್ವಂಸ ನಡೆದು ಇಂದಿಗೆ 25 ವರ್ಷ: ಬಿಗಿ ಬಂದೋಬಸ್ತ್

ಅಯೋಧ್ಯೆ: ಬಾಬ್ರಿ ಮಸೀದಿ ಧ್ವಂಸ ನಡೆದು ಇಂದಿಗೆ 25 ವರ್ಷ. ದೇಶದಾದ್ಯಂತ ಕೋಮು ಸೌಹಾರ್ದ ಕದಡಿದ್ದ ಅಯೋಧ್ಯೆ ಬಾಬ್ರೀ ಮಸೀದಿ ಧ್ವಂಸ ಪ್ರಕರಣ ಇಂದಿಗೂ ತಾತ್ವಿಕ ಅಂತ್ಯ ಕಂಡಿಲ್ಲ. ವಿವಿಧ ಮುಸ್ಲಿಂ ಸಂಘಟನೆಗಳು ಇಂದು ಕರಾಳ ದಿನಾಚರಣೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಯೋಧ್ಯೆಯಲ್ಲಿ 1992ರ ಡಿಸೆಂಬರ್​ 6 ರಂದು ಬಿಜೆಪಿ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ, ಉಮಾ ಭಾರತಿ ಹಾಗೂ ಕಲ್ಯಾಣ್ ಸಿಂಗ್ ನೇತೃತ್ವದಲ್ಲಿ ಸಾವಿರಾರು ಕರಸೇವಕರು ಏಕಾಏಕಿ ದಾಳಿ ನಡೆಸಿ ಮಸೀದಿ ಧ್ವಂಸ ಮಾಡಿದ್ದರು. ಈ ಘಟನೆಯಲ್ಲಿ ಸಾವಿರಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದರು. ಅಲಹಾಬಾದ್​ ಕೋರ್ಟ್​​ನಲ್ಲಿ ಇಂದಿಗೂ ಈ ಪ್ರಕರಣದ ವಿಚಾರಣೆ ನಡೀತಿದೆ.

0

Leave a Reply

Your email address will not be published. Required fields are marked *