ಬಾಬ್ರಿ ಮಸೀದಿ – ರಾಮಮಂದಿರ ಅರ್ಜಿ ವಿಚಾರಣೆ ಜ.29ಕ್ಕೆ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಲಲಿತ್

ದೆಹಲಿ: ಅಯೋಧ್ಯೆಯ ಬಾಬ್ರಿ ಮಸೀದಿ – ಮಂದಿರ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅದನ್ನು ಜ.29ಕ್ಕೆ ಮುಂದೂಡಿದೆ. ಸಾಂವಿಧಾನಿಕ ಪೀಠದ ಐದು ನ್ಯಾಯಮೂರ್ತಿಗಳ ಪೈಕಿ ನ್ಯಾ. ಉದಯ್ ಲಲಿತ್ ವಿಚಾರಣೆಯಿಂದ ಹಿಂದೆ ಸರಿದರು. 1992ರಲ್ಲಿ ಕಲ್ಯಾಣ್ ಸಿಂಗ್ ಸಿಎಂ ಆಗಿದ್ದ ಅವಧಿಯಲ್ಲೇ ಬಾಬ್ರಿ ಮಸೀದಿ ಧ್ವಂಸಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಕಲ್ಯಾಣ್ ಸಿಂಗ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದರು. 1994ರಲ್ಲಿ ಕಲ್ಯಾಣ್ ಸಿಂಗ್ ಪರವಾಗಿ ಉದಯ್ ಲಲಿತ್ ವಾದಿಸಿದ್ದರು.  ಇದೇ ವಿಷಯವನ್ನು ಮುಸ್ಲಿಂ ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ವಿಚಾರಣೆ ವೇಳೆ ಸಿಜೆಐ ಅವರ ಗಮನ ಸೆಳೆದರು. ಆದರೆ, ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅವರು ಮನವಿ ಮಾಡಲಿಲ್ಲ. ಆದರೆ, ಈ ವೇಳೆ ಸ್ವಇಚ್ಛೆಯಿಂದ ಲಲಿತ್ ಅವರು ವಿಚಾರಣೆಯಿಂದ ಹಿಂದೆ ಸರಿದರು.

ಇದಕ್ಕೂ ಮುನ್ನ ಈ ಶೀರ್ಷಿಕೆ ವಿವಾದ ಪ್ರಕರಣದ ಕುರಿತು ತ್ರಿಸದಸ್ಯ ಪೀಠ ನಡೆಸಲಿದೆ ಎಂದು ಸಿಜೆಐ ಹೇಳಿದ್ದರು. ಅನಂತರ ಪಂಚಪೀಠದಲ್ಲಿ ವಿಚಾರಣೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಇಂದು ಐದು ನ್ಯಾಯಮೂರ್ತಿಗಳ ಪೈಕಿ ಲಲಿತ್ ಅವರು ವಿಚಾರಣೆಯಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ

0

Leave a Reply

Your email address will not be published. Required fields are marked *