ಸೋಮವಾರ ಬಂದ್ ಗೆ ಕರೆ ನೀಡಿದ ಯಡಿಯೂರಪ್ಪ…

ರೈತರ ಸಾಲಮನ್ನಾಗೆ ಆಗ್ರಹಿಸಿದ ಬಿಜೆಪಿ ಸೋಮವಾರ ಬಂದ್ ಗೆ ಕರೆನೀಡಿದೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಸಿಎಂ ಮಾತು ನೀಡಿದಂತೆ ರೈತರ ಪರವಾಗಿ ನಿಲ್ಲಬೇಕು. ಇಲ್ಲವಾದಲ್ಲಿ ಸೋಮವಾರ ಬಂದ್ ನಡೆಸಲಾಗುವುದು. ಬಂದ್ ಯಶಸ್ವಿಗೊಳಿಸಲು ಎಲ್ಲ ಶಾಸಕರಿಗೂ ತಾಕೀತು ಮಾಡಿದ್ರು. ಸೋಮವಾರ ಜನರು ಸಹಕರಿಸಬೇಕು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಬೆಂಬಲಿಸುವಂತೆ ಯಡಿಯೂರಪ್ಪ ಮನವಿ ಮಾಡಿದ್ರು. ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿ, ಅಪ್ಪ ಮಕ್ಕಳ ಪಕ್ಷ ಜನಾದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ್ರು….

0

Leave a Reply

Your email address will not be published. Required fields are marked *