ಸಿಎಂ ವಿರುದ್ಧ ಆಯಾನೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ

 

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ಹಗಲೆಲ್ಲಾ ಇಷ್ಟೊಂದು ನಿದ್ದೆ ಮಾಡ್ತಾರೆ, ಹಾಗಾದ್ರೆ ರಾತ್ರಿಯೆಲ್ಲಾ ಏನ್ಮಾಡ್ತಾರೆ ಎಂಬ ಅನುಮಾನ ಇದೆ ಎಂದು ಬಿಜೆಪಿ ಮಾಜಿ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಿನ್ನೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತಾನಾಡಿದ ಅವರು ಸಿದ್ದರಾಮಯ್ಯ ಹಗಲೆಲ್ಲಾ ಇಷ್ಟೊಂದು ನಿದ್ದೆ ಮಾಡ್ತಾರೆ,  ಹಾಗಾದ್ರೆ ರಾತ್ರಿಯೆಲ್ಲಾ ಏನ್ಮಾಡ್ತಾರೆ ಎಂದು ಸಿ.ಟಿ.ರವಿ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಬೇಕು ಎಂದು ವ್ಯಂಗ್ಯವಾಡಿದರು. ಹಗಲೆಲ್ಲಾ ನಿದ್ದೆ ಮಾಡೋ ಸಿಎಂ, ರಾತ್ರಿಯೆಲ್ಲಾ ಯಾವ ಘನಾಂಧಾರಿ ಕೆಲಸ ಮಾಡ್ತಾರೆ ಅಂತಾ ನಾವು ಪ್ರಶ್ನೆ ಮಾಡಬೇಕಾಗಿದೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು, ಇನ್ನು ಇದೇ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಮಾತಾನಾಡಿ ಸೋನಿಯಾ ಗಾಂಧಿ ಆಯ್ತು, ಈಗ ರಾಹುಲ್ ಗಾಂಧಿ ಮುಂದೆ 20 ವರ್ಷವಾದ ಮೇಲೆ ಮತ್ಯಾರೋ ಎಂದು ವ್ಯಂಗ್ಯವಾಡಿದರು.

0

Leave a Reply

Your email address will not be published. Required fields are marked *