ಆಸ್ಟ್ರೇಲಿಯನ್​ ಓಪನ್​​ ಗ್ರ್ಯಾಂಡ್ ಸ್ಲ್ಯಾಮ್​​…

ಮೆಲ್ಬೋರ್ನ್​​ನಲ್ಲಿ ಟೆನಿಸ್​ ಲೋಕನ ದಿಗ್ಗಜನ ಶ್ರೇಷ್ಠ ಆಟದ ಆಟ ಮತ್ತೊಮ್ಮೆ ಅನಾವರಣವಾಗಿದೆ. ವರ್ಷದ ಮೊದಲ ಗ್ರ್ಯಾಂಡ್​ ಸ್ಲ್ಯಾಮ್​ ಟೂರ್ನಿಗೆ ಮುತ್ತಿಟ್ಟ ದಾಖಲೆ ಗ್ರ್ಯಾಂಡ್​ ಸ್ಲ್ಯಾಮ್​​ಗಳ ಒಡೆಯ, ಮತ್ತೊಂದು ವಿಕ್ರಮಕ್ಕೆ ಸಾಕ್ಷಿಯಾದ್ರು. ಮೆಲ್ಬೋರ್ನ್​ ಅಂಗಳದಲ್ಲಿ ಭಾನುವಾರ ನಡೆದ, ವರ್ಷದ ಮೊದಲ ಗ್ರ್ಯಾಂಡ್​ ಸ್ಲ್ಯಾಮ್​ ಟೆನಿಸ್​ ಟೂರ್ನಿಯ ಪ್ರಶಸ್ತಿ ಸುತ್ತಿನ ಕಾದಾಟ ನಡೆಯಿತು. ಇನ್ನು ಪುರುಷರ ಸಿಂಗಲ್ಸ್​​ನಲ್ಲಿ ಸ್ವಿಜರ್​ಲೆಂಡ್​​ನ ರೋಜರ್​ ಫೆಡರರ್​ ಹಾಗೂ ಕ್ರೋಷಿಯಾದ ಮರಿನ್​ ಸಿಲಿಕ್​ ಕಾದಾಟ ನಡೆಸಿದ್ರು. ಪ್ರಶಸ್ತಿ ಎತ್ತಲು ಉಭಯ ತಂಡಗಳು ಭರ್ಜರಿ ಫೈಟ್​ ನಡೆಸಿದರು.

ಮೊದಲ ಸೆಟ್​​ನಲ್ಲಿ ಭರ್ಜರಿ ಆಟ ಆಡಿದ ಫೆಡರರ್​, ಮರೀನ್​ ಸಿಲಿಕ್​ ಯೋಜನೆಯನ್ನು ಬುಡಮೇಲು ಮಾಡಿದ್ರು. ಅಲ್ಲದೆ ಮೊದಲ ​ ಸೆಟ್​​ನಲ್ಲಿ ಫೆಡರರ್ 6-2 ರಿಂದ ಗೆದ್ದು ಮುನ್ನಡೆದ್ರು. ಆದ್ರೆ ಎರಡನೇ ಸೆಟ್​​ನಲ್ಲಿ ಜಿದ್ದಾಜಿದ್ದಿನ ಫೈಟ್​ ನೀಡಿದ ಮರೀನ್​, ಫೆಡರರ್​​ಗೆ ಶಾಕ್​ ನೀಡಿದ್ರು. ಅಲ್ಲದೆ 2ನೇ ಸೆಟ್​​ನಲ್ಲಿ ಮೇಲುಗೈ ಸಾಧಿಸಿದ್ರು. ಇನ್ನು ಮೂರನೇ ಸೆಟ್​​ನಲ್ಲಿ ಶ್ರೇಷ್ಠ ಆಟದ ಪ್ರದರ್ಶನ ನೀಡಿದ ಫೆಡರರ್​​, ಸುಲಭವಾಗಿ ಸೆಟ್​ ಗೆದ್ದರು. ಆದ್ರೆ ನಾಲ್ಕನೇ ಸುತ್ತಿನಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ಎಡವಿದ್ರು. 5ನೇ ಹಾಗೂ ಕೊನೆಯ ಸೆಟ್​​ನಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ, ಫೆಡರರ್​ ತಮ್ಮ ಅನುಭವವನ್ನು ಧಾರೆ ಎರೆದು ಆಡಿದ್ರು. ಪರಿಣಾಮ ಸುಲಭವಾಗಿ ಕೊನೆಯ ಸೆಟ್​ ಗೆದ್ದು ಬೀಗಿದ್ರು. ಈ ಮೂಲಕ ಫೆಡರರ್​​ ವಿಶ್ವ ಟೆನಿಸ್​ನಲ್ಲಿ ಮತ್ತೊಂದು ದಾಖಲೆ ಬರೆದ್ರು. ಪುರುಷರ ಸಿಂಗಲ್ಸ್​​ನಲ್ಲಿ 20 ಗ್ರ್ಯಾಂಡ್​ ಸ್ಲ್ಯಾಮ್​ ಪ್ರಶಸ್ತಿ ಬಾಚಿಕೊಂಡ ವಿಶ್ವದ ಮೊದಲ ಆಟಗಾರ, 6 ಬಾರಿ ಆಸ್ಟ್ರೇಲಿಯನ್​ ಓಪನ್​ಗೆ ಮುತ್ತಿಟ್ಟ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *