ಎರಡನೇ ಟೆಸ್ಟ್​ನಲ್ಲೂ ಆಸೀಸ್​ಗೆ ಭರ್ಜರಿ ಗೆಲುವು

ಭಾರೀ ಕುತೂಹಲ ಮೂಡಿಸಿದ್ದ ಹಗಲು-ರಾತ್ರಿಯ 2ನೇ ಟೆಸ್ಟ್ ಪಂದ್ಯ ಬುಧವಾರ ಕುತೂಹಲ ಮೂಡಿಸಿತ್ತು. ಗೆಲುವಿಗೆ 176 ರನ್​ಗಳ ಹಿನ್ನೆಡೆಯಲ್ಲಿದ್ದ ಇಂಗ್ಲೆಂಡ್ ತಂಡ, 2ನೇ ಟೆಸ್ಟ್ ಅಂತಿಮ ದಿನದಾಟದಲ್ಲಿ ಪಂದ್ಯವನ್ನ ಗೆದ್ದೇಬಿಡ್ತು ಎನ್ನುವಷ್ಟರಲ್ಲಿ ಸ್ಮಿತ್ ಬೌಲರ್​ಗಳು ಕಮಾಲ್ ಮಾಡಿದ್ರು. 4ನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿದ್ದ ರೂಟ್ ಪಡೆ, ಅಂತಿಮ ದಿನದಾಟದಲ್ಲಿ ಪಂದ್ಯವನ್ನ ಸುಲಭವಾಗಿ ಗೆದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನ 1-1 ರಿಂದ ಸಮಬಲಮಾಡಿಕೊಳ್ಳೊ ವಿಶ್ವಾಸದಲ್ಲಿತ್ತು. ಆದ್ರೇ, ಸ್ಮಿತ್ ಬೌಲರ್​ಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.

67 ರನ್ ಗಳಿಸಿ, 5ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಜೋ ರೂಟ್ ಪಡೆಗೆ ದಿನದ ಆರಂಭದಲ್ಲೇ ಜೋಶ್ ಹ್ಯಾಜಲ್​ವುಡ್​ ಆಘಾತ ನೀಡಿದ್ರು. 5 ರನ್ ಗಳಿಸಿದ್ದ ಕ್ರೀಸ್ ವೋಕ್ಸ್​ಗೆ ಹ್ಯಾಜಿಲ್​​​ವುಡ್ ಪೆವಿಲಿಯನ್ ಹಾದಿ ತೋರಿಸಿದ್ರು. ಬಳಿಕ ವೋಕ್ಸ್​ರಂತೆ ರೂಟ್​ ಕೂಡ ಹ್ಯಾಜಲ್​ವುಡ್​ ಬೌಲಿಂಗ್​​ನಲ್ಲೇ ವಿಕೆಟ್ ಒಪ್ಪಿಸಿದ್ರು. ರೂಟ್ ಬಳಿಕ ಕ್ರೀಸ್​ಗೆ ಬಂದಷ್ಟೇ ವೇಗವಾಗಿ ಮೊಯೀನ್ ಅಲಿ ಕೂಡ ನಥಾನ್ ಲಿಯಾಮ್​ರ ಎಲ್ಬಿಡಬ್ಲೂ ಬಲೆಗೆ ಬಿದ್ರು. ಅನಂತರ ನಡೆದಿದ್ದೇ ಮಿಚೆಲ್ ಸ್ಟಾರ್ಕ್ ಮ್ಯಾಜಿಕ್.

ಇನ್ನು, 188 ರನ್​ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ರೂಟ್ ಪಡೆಗೆ ಮಿಚೆಲ್ ಸ್ಟಾರ್ಕ್, ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದ್ರು. ಅಂತಿಮವಾಗಿ ಇಂಗ್ಲೆಂಡ್ ತಂಡ 233 ರನ್​ಗಳಿಗೆ ಆಲೌಟ್​ ಆಗೋ ಮೂಲಕ ಗೆಲ್ಲೋ ಪಂದ್ಯವನ್ನ ಕೈಚೆಲ್ಲಿತು. ಈ ಮೂಲಕ 120 ರನ್​ಗಳ ಭರ್ಜರಿ ಗೆಲುವು ದಾಖಲಿಸಿದ ಆಸೀಸ್, 5 ಟೆಸ್ಟ್ ಪಂದ್ಯಗಳ ಸರಣಿಯನ್ನ 2-0 ಯಿಂದ ಮುನ್ನಡೆ ಸಾಧಿಸಿತು. ಅಂತಿಮವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದ ಶಾನ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ರು. ಇನ್ನು, ಮೂರನೇ ಟೆಸ್ಟ್ ಪಂದ್ಯ ಪರ್ತ್​ನಲ್ಲಿ ನಡೆಯಲಿದ್ದು, ಆ ಪಂದ್ಯದ ಮೇಲೆ ಉಭಯ ತಂಡಗಳು ದೃಷ್ಠಿ ನೆಟ್ಟಿವೆ.

ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *