ನ್ಯಾ. ಗೋಯಲ್ ನೇಮಕ ವಿರೋಧಿಸಿದ ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆ

ದೆಹಲಿ: ರಾಷ್ಟ್ರೀಯ ಹಸಿರು ಮಂಡಳಿ ಮುಖ್ಯಸ್ಥರಾಗಿ ನ್ಯಾ. ಆದರ್ಶ್ ಕುಮಾರ್ ಗೋಯಲ್ ಅವರ ನೇಮಕವನ್ನು ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆಯವರೇ ವಿರೋಧಿಸಿದ್ದಾರೆ. ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಸಂಬಂದ ಅವರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿರುವ ಅವರು, ಅವರನ್ನು ಎನ್​ಜಿಟಿಗೆ ನೇಮಿಸಿರುವ ಕ್ರಮ ಸರಿಯಲ್ಲ. ಎನ್​ಜಿಟಿ ಮುಖ್ಯಸ್ಥ ಹುದ್ದೆಯಿಂದ ಅವರನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗೋಯಲ್ ಅವರು ದಲಿತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎನ್ನುವ ಮೂಲಕ, ಪ್ರಧಾನಿ ನರೇಂದ್ರ ಮೋದಿಯವರ ನೇಮಕ ನಿರ್ಧಾರದ ವಿರುದ್ಧ ಕೇಂದ್ರ ಸಚಿವರಿಂದಲೇ ಅಪಸ್ವರ ವ್ಯಕ್ತವಾದಂತಾಗಿದೆ.

0

Leave a Reply

Your email address will not be published. Required fields are marked *