ಇಂದು ಮುಂದುವರೆಯಲಿದೆ ವಿಧಾನಸಭೆ ಕಲಾಪ

ಇಂದು ಸಹ ವಿಧಾನಸಭೆ ಕಲಾಪ ಮುಂದುವರೆಯಲಿದೆ. ಇಂದು ಸದನದಲ್ಲಿ ಮತ್ತೊಮ್ಮೆ ಬಿಜೆಪಿ ಶಾಸಕ ರಾಮದಾಸ್ ನಿಯಮ 68 ಅಡಿಯಲ್ಲಿ ಇಂದಿರಾ ಕ್ಯಾಂಟೀನ್ ಕಿಕ್ ಬ್ಯಾಂಕ್ ಬಗ್ಗೆ ಪ್ರಸ್ತಾಪಿಲಿಸಿದ್ದಾರೆ. ಇಂದು ಸದನದಲ್ಲಿ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ‌ ನಡುವೆ ಕಾದಾಟ ನಡೆಯಲಿದೆ. ಕಿಕ್‌ಬ್ಯಾಕ್ ಪ್ರಕರಣವನ್ನು‌ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಸದನದಲ್ಲಿ ಪಟ್ಟು ಹಿಡಿಯಬಹುದು. ಹೀಗಾಗಿ ಸದನದಲ್ಲಿ ಕಿಕ್‌ಬ್ಯಾಕ್ ಪ್ರಕರಣ ಗದ್ದಲ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಇನ್ನು ಇದರ ಜೊತೆಗೆ ರೈ ಕೃಷಿ ವಿವಿ ತಿದ್ದುಪಡಿ ವಿಧೇಯಕ‌ದ ಬಗ್ಗೆಯೂ ಚರ್ಚೆ ಬಿಸಿಯೇರುವ ಸಾಧ್ಯತೆ ಇದೆ. ಆದ್ರೆ ಸದನಕ್ಕೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಶಾಸಕರು, ಸಚಿವರು ಗೈರಾಗುವ ಮೂಲಕ ಬಿಜೆಪಿ ಹೋರಾಟಕ್ಕೆ ತಣ್ಣೀರೆರಚುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *