ಒಕ್ಕಲಿಗರ ಸಂಘದಿಂದ ಅಪ್ಪಾಜಿ ಗೌಡ ಔಟ್​…!

ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಅಪ್ಪಾಜಿ ಗೌಡರನ್ನು ಪದಚ್ಯುತಗೊಳಿಸಲಾಗಿದೆ. ಒಕ್ಕಲಿಗರ ಭವನದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 18 ನಿರ್ದೇಶಕರು ಅಪ್ಪಾಜಿ ಗೌಡರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದಾರೆ. ಒಕ್ಕಲಿಗ ಸಂಘದ ಮೇಲೆ ಪ್ರಭುತ್ವ ಸಾಧಿಸಿದ್ದ ಅಪ್ಪಾಜಿ ಗೌಡರಿಗೆ ಮುಖಭಂಗವಾಗಿದೆ. ಜನವರಿ 18ರಂದು ಒಕ್ಕಲಿಗರ ಸಂಘದ ಚುನಾವಣೆ ನಡೆಯಲಿದ್ದು, ಸರ್ಕಾರದಿಂದ ನಿಯೊಜನೆಗೊಂಡ ವೀಕ್ಷಕರ ಸಮ್ಮುಖದಲ್ಲಿ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಆದ್ರೆ ಇಂದು ನಡೆದ ಮಹತ್ವದ ಸಭೆಯಲ್ಲಿ ಅಪ್ಪಾಜಿ ಗೌಡರ ಬಣದ ನಿರ್ದೇಶಕರು ಸಭೆಗೆ ಗೈರು ಹಾಜರಾಗಿದ್ರು. 

0

Leave a Reply

Your email address will not be published. Required fields are marked *