ಆಪ್​ಗೆ ರಾಜೀನಾಮೆ ನೀಡಿದ ಅಶುತೋಷ್

ದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಅಶುತೋಷ್ ರಾಜೀನಾಮೆ ಸಲ್ಲಿಸಿದ್ದು, ಪ್ರತಿಯೊಂದು ಪ್ರಯಾಣಕ್ಕೂ ಕೊನೆ ಇರುತ್ತದೆ. ಕ್ರಾಂತಿಗೆ ಕೂಡ ಒಂದು ಕೊನೆ ಇರುತ್ತದೆ. ಆಪ್​​ನೊಂದಿಗಿನ ನನ್ನ ಸಂಬಂಧ ಸುಂದರವಾಗಿತ್ತು. ಪಕ್ಷಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪತ್ರಕರ್ತರಾಗಿದ್ದ ಅಶುತೋಷ್ ಅರವಿಂದ್ ಕೇಜ್ರಿವಾಲ್ ಸಂಸ್ಥಾಪನೆಯ ಪಕ್ಷ ಸೇರಿ ಸಂಘಟನೆಯಲ್ಲಿ ತೊಡಗಿದ್ದ ಇವರು, ರಾಜೀನಾಮೆ ಅಂಗೀಕರಿಸುವಂತೆ ಪಕ್ಷದ ರಾಜಕೀಯ ವ್ಯವಹಾರ ಸಮಿಗೆ ಮನವಿ ಮಾಡಿದ್ದೇನೆ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಅವರು ಟ್ವೀಟ್ ಮೂಲಕ ರಾಜೀನಾಮೆ ವಿಷಯ ಹಂಚಿಕೊಂಡಿದ್ದಾರೆ.

ಇದರೊಂದಿಗೆ ಇನ್ನೊಂದು ಟ್ವೀಟ್ ಮಾಡಿರುವ ಅವರು, ಮಾಧ್ಯಮ ಸ್ನೇಹಿತರಿಗೆ. ದಯಮಾಡಿ ನನ್ನ ಖಾಸಗಿತನವನ್ನು ಗೌರವಿಸಿ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಬೈಟ್​ ಕೊಡುವುದಿಲ್ಲ. ದಯಮಾಡಿ ಸಹಕರಿಸಿ ಎಂದು ಅವರು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಚಾಂದಿನಿ ಚೌಕ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ಇಳಿದಿದ್ದ ಅವರು, 3 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಆದರೆ, ದೆಹಲಿಯ ಮಾಜಿ ಸಿಎಂ ಹರ್ಷವರ್ಧನ್ ಅವರು ಗೆಲುವು ಸಾಧಿಸಿದ್ದರು. ಇದೀಗ ಅವರು ಮತ್ತೆ ಪತ್ರಿಕೋದ್ಯಮಕ್ಕೆ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆಪ್ ಸಂಘಟಿಸುವ ವೇಳೆ ಅಶುತೋಷ್ ಸೇರಿದಂತೆ, ಕ್ಯಾ. ಗೋಪಿನಾಥ್, ಮೀರಾ ಸಾನ್ಯಾಲ್, ಕಿರಣ್ ಬೇಡಿ, ಪ್ರಶಾಂತ್ ಭೂಷಣ್, ಶಾಜಿಯಾ ಇಲ್ಮಿ, ಕುಮಾರ್ ವಿಶ್ವಾಸ್ ಸೇರಿಂದತೆ ಅನೇಕರು ಅರವಿಂದ್ ಕೇಜ್ರಿವಾಲ್ ಜೊತೆಗಿದ್ದರು. ಆದರೆ, ಇದೀಗ ಇವರೆಲ್ಲ ಆಪ್ ತೊರೆದಿದ್ದಾರೆ. ಈ ಮೂಲಕ ಆಪ್​ಗೆ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *