ಡಿಸೈನ್ ಗಳುಳ್ಳ ಈ ಆ್ಯಂಟಿಕ್ ಜ್ಯುವೆಲ್ಲರ್ಸ್​ ಮುಂದೆ ಬಂಗಾರ ಸೋಲುತ್ತೆ ಅಂದ್ರೆ ತಪ್ಪಿಲ್ಲ…

ಆಭರಣಗಳೆಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಎಷ್ಟು ತಗೊಂಡ್ರು, ಮತ್ತಷ್ಟು ಬೇಕು ಅನ್ನೋದು ಹೆಣ್ಮಕ್ಕಳ ಸಹಜ ಗುಣ. ಹೆಣ್ಮಕ್ಕಳು ಕೇಳಿದ್ದನ್ನೆಲ್ಲ ಕೊಡುಸೊ ಗಂಡಸ್ರಿಗೆ ಜೀವನೇ ಬಾಯಿಗೆ ಬಂದಾಗೆ ಆಗಿರುತ್ತೆ ಅಲ್ವಾ.? ಇನ್ಮೇಲೆ ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಪ್ರತಿ ದಿನ ಅವ್ರು ಇಷ್ಟ ಪಡುವಂತಹ ಒಡವೆಗಳನ್ನ ಕೋಡಿಸಬಹುದು.ಈಗಂತೂ ಎಲ್ಲಿ ನೋಡುದ್ರು ಫ್ಯಾಶನ್, ಫ್ಯಾಶನ್. ಹೇಳಿ ಮಾಡಿಸಿದಂತಹ ಡಿಸೈನ್ ಗಳುಳ್ಳ ಈ ಆ್ಯಂಟಿಕ್ ಜ್ಯುವೆಲ್ಲರ್ಸ್​ ಮುಂದೆ ಬಂಗಾರ ಸೋಲುತ್ತೆ ಅಂದ್ರೆ ತಪ್ಪಿಲ್ಲ… ಆಭರಣಗಳು ಅಂದ್ರೆ ಸಾಕು ಹೆಣ್ಮಕ್ಕಳಿಗೆ ಎಲ್ಲಿಲ್ಲದ ಕುತೂಹಲ. ಟ್ರೆಂಡಿಯಾಗಿರೋ ಆಭರಣಗಳನ್ನು ಖರೀದಿಸುವ ಮುನ್ನ ಹೆಂಗೆಳೆಯರು ಡಿಸೈನ್ ಹಾಗಿರಬೇಕು, ಹೀಗರಬೇಕು ಅಂತ ಹುಡುಕಾಟವನ್ನೇ ನಡೆಸ್ತಾರೆ. ಹೀಗಿರುವಾಗ ಈ ದೃಶ್ಯದಲ್ಲಿ ಕಾಣಿಸುತ್ತಿರೋ ಆಭರಣ ಕಣ್ಣು ಕುಕ್ಕದೇ ಇರುತ್ತಾ. ಚಿನ್ನದ ಒಡವೆಗಳು ಕೂಡ ಇವುಗಳ ಮುಂದೆ ನಾಚಿ ನೀರಾಗುವಂತಿವೆ….

ಅಂದ್ಹಾಗೆ ಕೆಲ ವರ್ಷಗಳ ಹಿಂದೆ ಈ ಆ್ಯಂಟಿಕ್ ಆಭರಣಗಳದ್ದೆ ಟ್ರೆಂಡ್ ಇತ್ತು . ಸ್ವಲ್ಪ ಸಮಯ ಮಾಯಾವಾಗಿದ್ದ ಈ ಟ್ರೆಂಡ್ ಈಗ ಮತ್ತೆ ಜನ್ರನ್ನ ತನ್ನತ್ತ ಸೆಳೆಯೊದಕ್ಕೆ ಶುರುಮಾಡಿದೆ. ಆ್ಯಂಟಿಕ್ ಆಭರಣಗಳಲ್ಲಿ ನೆಕ್ಲೇಸ್, ಬಳೆ, ಕಿವಿಯೋಲೆಯಿಂದ ಹಿಡಿದು ಕಾಲ್ಗೇಜ್ಜೆ ಯವರೆಗೂ ಬಾರಿ ಬೇಡಿಕೆ ಇದೆ . ಚಿನ್ನದ ಬೆಲೆ ದಿನೆ ದಿನೇ ಹೆಚ್ಚಾಗ್ತಾಯಿರೊದ್ರಿಂದ ಮಧ್ಯಮ, ಕೆಳ ವರ್ಗದ ಜನ್ರಿಗೆ ಚಿನ್ನವನ್ನು ಕೊಂಡುಕೊಳ್ಳೊವ ಶಕ್ತಿ ಕಡಿಮೆ . ..ಅಂತವರ ಪಾಲಿಗೆ ಈ ಆ್ಯಂಟಿಕ್ ಆಭರಣಗಳು ವರವಾಗಿ ಹೊರಹೊಮ್ಮಿದೆ ಅಂದ್ರೆ ತಪ್ಪಾಗಲಾರದು…ಇನ್ನು ಈ ಒಡವೆಗಳನ್ನಾ ಡೆಲ್ಲಿ, ಬಾಂಬೆ, ಕಲ್ಕತ್ತ, ಜೈಪುರ್ ನಿಂದ ತರಿಸಲಾಗುತ್ತಿದ್ದು, ಇದರ ಬೆಲೆಗಳು ಕೂಡ ಗ್ರಾಹಕರಿಗೆ ಕೈಗೆಟುಕುವಂತಿದೆ. ಸುಮಾರು 250-ರೂಪಾಯಿಂದ ಹಿಡಿದು 15 ಸಾವಿರದವರೆಗೂ ಈ ಆಭರಣಗಳ ಬೆಲೆ ಇದೆ. ಚಿನ್ನದ ಒಡವೆ ಆದ್ರೆ ಒಂದೇ ಡಿಸೈನ್,ಒಂದೇ ಒಡವೆನ ಹಾಕೋ ಬೇಕು, ಅದು ಅಲ್ಲದೆ ಒಂದು ಗ್ರಾಂ ಚಿನ್ನದ ಆಭರಣಕ್ಕೆ ಕೊಡೊ ದುಡ್ಡಲ್ಲಿ ಡಿಫರೆಂಟ್ ಡಿಸೈಂನ್ಸ್ ನಲ್ಲಿ ಸಿಗೊ ಈ ಆ್ಯಂಟಿಕ್ ಆಭರಣಗಳನ್ನಾ ಕೊಂಡುಕೊಳ್ಳೊದು ಉತ್ತಮ ಅಂತಾರೆ ಅಂಗಡಿ ಮಾಲಿಕರು.ಒಟ್ತಲ್ಲಿ ಇದೀಗ ಆಭರಣ ಪ್ರಿಯರು ಆ್ಯಂಟಿಕ್​ ಅಂಗಡಿಗಳತ್ತ ಮುಖ ಮಾಡಿದ್ದು, ಕಡಿಮೆ ಬೆಲೆಯಲ್ಲಿ ಆಕರ್ಷಕವಾಗಿ ಕಾಣುವ ಆಭರಣಗಳನ್ನ ಕೊಂಡುಕೊಳ್ಳುವಲ್ಲಿ ಫುಲ್​ಬ್ಯೂಸಿಯಾಗಿದ್ದಾರೆ..

ಸುಪ್ರಿಯಾಶರ್ಮಾ ಸುದ್ದಿ ಟಿವಿ ಬೆಂಗಳೂರು……..

0

Leave a Reply

Your email address will not be published. Required fields are marked *