ಕೇಂದ್ರದ ವಿರುದ್ಧ ಅಣ್ಣಾ ಕಿಡಿ..!

ಚಿತ್ರದುರ್ಗ: ಮುರಘಾ ಮಠಕ್ಕೆ ದಿಢೀರ್ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಸಂವಿಧಾನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ಅತ್ಯುತ್ತಮ ಸಂವಿಧಾನ, ಎಲ್ಲರಿಗೂ ಬದುಕುವ ಹಕ್ಕು ಕೊಟ್ಟಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ಸರಣಿಗಳು ನಡೆಯುತ್ತಿವೆ ಆದರೆ ರೈತರ ಆತ್ಮಹತ್ಯೆ ತಡೆಯಲು ಆಳುವ ಸರ್ಕಾರಗಳು ವಿಫಲವಾಗಿವೆ. ರೈತರ ಸಮಸ್ಯೆಗಳನ್ನು ಮುನ್ನಲೆಗೆ ತರಲು ಮಾ.23ರಂದು ರಾಮ್​ಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ. ರೈತರಿಗೆ 60 ವರ್ಷದ ನಂತರ ಪ್ರತಿಯೊಬ್ಬರಿಗೂ ಪಿಂಚಣಿ ಸಿಗಬೇಕು. ಈ ಬೇಡಿಕೆಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.

0

Leave a Reply

Your email address will not be published. Required fields are marked *