ಅಮೆರಿಕಾದ ಅಲಾಸ್ಕಾ ಏರ್​ಲೈನ್ಸ್ ವಿಮಾನ ಅಪಹರಣ

ವಾಷಿಂಗ್ಟನ್: ವಾಷಿಂಗ್ಟನ್​​ನ ಸಿಯಾಟಲ್ – ಟಕೋಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಧಿಕೃತವಾಗಿ ಕಾಕ್​ಪಿಟ್​​ಗೆ ನುಗ್ಗಿದ ವ್ಯಕ್ತಿಯೊಬ್ಬ ಅಲಾಸ್ಕಾ ವಿಮಾನಯಾನ ಸಂಸ್ಥೆಯ ವಿಮಾನವೊಂದನ್ನು ಅಪರಹರಿಸಿ, ಅಪಘಾತ ಎಸಗಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣ ಅಧಿಕಾರಿಗಳು ವಿಮಾನ ಅಪಹರಣವಾಗಿದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಲಾಸ್ಕಾ ಏರ್​ಲೈನ್ಸ್, ಹಾರಿಜನ್ ಏರ್ Q400 ವಿಮಾನವನ್ನು ಅಪಹರಿಸಿರುವ ಕುರಿತು ಟ್ವೀಟ್ ಮಾಡಿದೆ. ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂಬ ಮಾಹಿತಿ ಇದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕೂಡ ಸಂಸ್ಥೆ ಹೇಳಿದೆ. ಇನ್ನು ಈ ಅಪಹರಣದಲ್ಲಿ ಯಾವುದೇ ಭಯೋತ್ಪಾದಕರ ಕೃತ್ಯ ಇಲ್ಲವೆಂದು ವರದಿಯಾಗಿದೆ.

ವಿಮಾನ ಅಪಹರಣದ ನಂತರ ಎರಡು ಎಫ್-15 ಸೇನಾ ವಿಮಾನಗಳು ಹಿಂಬಾಲಿಸಿದವು. ಇದರಿಂದ ಅಪಘಾತವಾಗಿಲ್ಲ ಎಂದು ವರದಿಯಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು, ಅಲಾಸ್ಕಾ ವಿಮಾನವನ್ನು ಒಬ್ಬ ವ್ಯಕ್ತಿ ವಿಮಾನ ನಿಲ್ದಾಣದಿಂದ ಅಪಹರಿಸಿದ. ಇದು ಆತ್ಮಹತ್ಯೆಗಾಗಿ ನಡೆದಿರುವ ಅಪಹರಣ ಮತ್ತು ಈ ಕೃತ್ಯಕ್ಕೂ ಭಯೋತ್ಪಾನೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

0

Leave a Reply

Your email address will not be published. Required fields are marked *