ರೈತ ಸಂಘದಿಂದ 36 ದಿನಗಳಿಂದ ಅನಿರ್ದಿಷ್ಟ ಧರಣಿ

ರಾಯಚೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 36 ದಿನಗಳಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುತ್ತಿದೆ. ಪಟ್ಟಣದ ಉಪ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ಜಾಲಹಳ್ಳಿಯ ಸಂತೆ ಮಾರುಕಟ್ಟೆ ಒತ್ತುವರಿ ತೆರವು, ಸಂಪೂರ್ಣ ರಸ್ತೆ ಅಗಲೀಕರಣ, ಅಕ್ರಮ ವಾಣಿಜ್ಯ ಮಳಿಗೆ ತೆರವಿಗೆ ಒತ್ತಾಯಿಸಿ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಉಪವಾಸ ಸತ್ಯಾಗ್ರಹ, ಜಾಲಹಳ್ಳಿಯಿಂದ ದೇವದುರ್ಗಕ್ಕೆ ಪಾದಯಾತ್ರೆ ಸಹ ಮಾಡಿದ್ದಾರೆ. ಆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸುತ್ತಿಲ್ಲ. ರೈತರ ಸೌಜನ್ಯಕ್ಕೂ ಜಿಲ್ಲಾಡಳಿತ ಧರಣಿ ನಿರತರ ಕಡೆ ಕಣ್ಣು ಬಿಟ್ಟಿಲ್ಲ. ಇದು ಪ್ರತಿಭಟನಾಕಾರರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಂತಾಗಿದೆ.

1+

Leave a Reply

Your email address will not be published. Required fields are marked *