ನಿಮ್ಮಲ್ಲೊಂದು ಕಳಕಳಿಯ ಮನವಿ: ಕೈ ಉತ್ಪನ್ನಗಳ ನೆರವಿಗೆ ಪ್ರಸನ್ನ ಅಭಿಯಾನ

ಬೆಂಗಳೂರು: ಕೈ ಉತ್ಪನ್ನಗಳ ಪರವಾಗಿ ಅಭಿಯಾನ ನಡೆಸುತ್ತಿರುವ ನಿರ್ದೇಶಕ ಪ್ರಸನ್ನ ಮನವಿ ಮಾಡಿದ್ದು, ನಾಡಿನ ಜನರಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ.

ನಲ್ಮೆಯ ಗ್ರಾಮ ಸೇವಾ ಸಂಘದ ಬಂಧುಗಳೇ,

ಕೈಉತ್ಪನ್ನಗಳ ತಯಾರಿಕೆ ಹಾಗೂ ಬಳಕೆಯ ಮೂಲಕವೇ ಬಹುಸಂಖ್ಯಾತ ಬಡಜನರಿಗೆ ಜೀವನೋಪಾಯವನ್ನು ಕಲ್ಪಿಸಲು ಸಾಧ್ಯವೆಂಬ ತತ್ವವನ್ನು ವ್ಯಾಪಕ ಹೋರಾಟದ ಮೂಲಕ ಗ್ರಾಮ ಸೇವಾ ಸಂಘವು (ಗ್ರಾ.ಸೇ.ಸಂ) ಕಳೆದ ಒಂದು ವರ್ಷದಿಂದ ಪ್ರತಿಪಾದಿಸುತ್ತಿದೆ. ಕಳೆದ ವರ್ಷ ಕೈಉತ್ಪನ್ನಗಳ ಮೇಲೆ ಸರ್ಕಾರ ವಿಧಿಸಿದ GST ಕರದ ವಿರುದ್ಧ ಪ್ರತಿಭಟನೆಯಿಂದ ಆರಂಭವಾಗಿ ಧರಣಿ,ಸತ್ಯಾಗ್ರಹ ಮತ್ತು ಪಾದಯಾತ್ರೆಗಳು ಮತ್ತು ಈಚಿನ ದಿನಗಳಲ್ಲಿ ನಡೆಯುತ್ತಿರುವ “ಹೇರಾಮ್!” ಚಳುವಳಿಗಳ ಮೂಲಕ ಕೈಉತ್ಪನ್ನ ಮತ್ತು ಸುಸ್ಥಿರ ಬದುಕಿನ ಸಮಸ್ಯೆಗಳನ್ನು ಜನರಿಗೆ ತಿಳಿಸುವ ಕಾರ್ಯದಲ್ಲಿ ಗ್ರಾಮ ಸೇವಾ ಸಂಘಕ್ಕೆ ಹೆಚ್ಚು ಹೆಚ್ಚು ಬೆಂಬಲ ಸಿಗುತ್ತಿರುವುದು ಹರುಷದ ಸಂಗತಿ.

ಹಾಗೆಯೇ ಸಂಘಟನೆ ಬೆಳೆಯುತ್ತಿದ್ದಂತೆ ನಮ್ಮ ವೆಚ್ಚಗಳು ಕೂಡ ಹೆಚ್ಚುತ್ತಿವೆ. ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಬಹುಮಂದಿ ಸ್ವಯಂಪ್ರೇರಿತರಾಗಿ ಸೇವೆ ಮಾಡುವುದಕ್ಕೆ ಹುರುಪಿನಿಂದ ಬಂದು ಸಂಘಟನೆಯ ವೆಚ್ಚಗಳನ್ನು ತಾವೇ ಹೊರುತ್ತಿದ್ದರೂ ಕೆಲವು ಕಾರ್ಯಾಚರಣೆಗಳಿಗೆ (ಉದಾ: ಮೀಡಿಯಾ ಮತ್ತು ಕಾರ್ಯಕ್ರಮ ನಿರ್ವಹಣೆ) ತಾಂತ್ರಿಕ ಸೇವಾ ಶುಲ್ಕವನ್ನು ಕೊಡಲೇಬೇಕಾದ ಪರಿಸ್ಥಿತಿಗಳು ಆಗಾಗ ಒದಗಿಬರುತ್ತವೆ. ಈಗ ನಾವು ಮೂರು  ಸ್ವಯಂಸೇವಕರನ್ನು ಸಂಬಳಕ್ಕೆ ಇರಿಸಿಕೊಂಡಿದ್ದೇವೆ. ಸಂತಸದ ವಿಷಯವೆಂದರೆ ನಮ್ಮೊಡನೆ ಕೈಜೋಡಿಸುವ ಸೇವಾಕರ್ತರು ಪುಕ್ಕಟೆಯಾಗಿ ದುಡಿಯುತ್ತಾರೆ ಅಥವಾ ಮಾರುಕಟ್ಟೆ ನಿರ್ಧರಿಸುವ ವೇತನಕ್ಕೆ ಸಾಕಷ್ಟು ಕಡಿಮೆಯಾದ ಮೊತ್ತವನ್ನಷ್ಟೇ ಸ್ವಇಚ್ಚೆಯಿಂದ ಸ್ವೀಕರಿಸುತ್ತಾರೆ.

ಸಧ್ಯಕ್ಕೆ ನಮ್ಮ ಪ್ರತಿ ತಿಂಗಳ ವೆಚ್ಚಗಳು ಸುಮಾರು 50ರಿಂದ 60 ಸಾವಿರ ರೂ.ಗಳಷ್ಟು ಇದ್ದು, ಇಲ್ಲಿಯವರೆಗೆ ಸದಸ್ಯರು,  ಮಿತ್ರರು ಮತ್ತು ಗ್ರಾ.ಸೇ.ಸಂ ಬಗ್ಗೆ ಅನುಕಂಪವುಳ್ಳ ನಾಗರಿಕರು ಈ ಮೊತ್ತವನ್ನು ಪೂರೈಸುತ್ತಲಿದ್ದಾರೆ. ಇದು ಹೆಚ್ಚು ವ್ಯವಸ್ಥಿತವಲ್ಲದ ಹಣ ಸಂಗ್ರಹಣದ ರೀತಿಯಾದ್ದರಿಂದ ಏರಿಳಿತಗಳು ಹೆಚ್ಚಾಗಿದ್ದು ನಮ್ಮ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಹಲವು ಎಡರುತೊಡರುಗಳನ್ನು ಎದುರಿಸಬೇಕಾಗಿ ಬಂದಿದೆ.

ಈ ಸಂದರ್ಭದಲ್ಲಿ ನಮ್ಮ ಹಣಕಾಸಿನ  ಪರಿಸ್ಥಿತಿಯನ್ನು ಉತ್ತಮಗೊಳಿಸಿ ಗ್ರಾಮ ಸೇವಾ ಸಂಘದ ಮುಂದಿನ ಹೆಜ್ಜೆಗಳನ್ನು ವ್ಯವಸ್ಥಿತಗೊಳಿಸಲು ನಿಮ್ಮ ಸಹಕಾರವು ಅತ್ಯಗತ್ಯ. ಕೆಳಕಂಡ ಎರಡು ಆಯ್ಕೆಗಳಲ್ಲೊಂದನ್ನು ತಾವು ಆರಿಸಿ ನಮ್ಮ ನ್ಯಾಯಪರ ಹೋರಾಟಗಳಿಗೆ ಸಂಕಲ್ಪಶಕ್ತಿಯನ್ನು ಒದಗಿಸಿಕೊಡಿರೆಂದು ಕೇಳಿಕೊಳ್ಳುತ್ತೇವೆ.

  1. ಸದಸ್ಯರು: ನಿಮ್ಮ ತಿಂಗಳ ಗಳಿಕೆಯ 2%ರಷ್ಟು ಹಣವನ್ನು ಗ್ರಾಮ ಸೇವಾ ಸಂಘಕ್ಕೆ ದೇಣಿಗೆಯಾಗಿ ಕೊಡುವುದು
  2. ಇತರ ಬೆಂಬಲಿಗರು: ಒಂದು ನಿಗದಿತ ಮೊತ್ತ, ಪ್ರತಿ ತಿಂಗಳು ಕೊಡುವುದು

ತಮ್ಮ ಶೀಘ್ರ ಉತ್ತರವು ನಮ್ಮ ಕಾರ್ಯಪ್ರಣಾಳಿಕೆಗಳನ್ನು ತ್ವರಿತವಾಗಿ ರೂಪಿಸಲು ಅನುಮಾಡಿಕೊಡುತ್ತದೆ. ಈ ಸಂಬಂಧ ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಹಣ ಪಾವತಿ ಮಾಡುವ ರೀತಿ

  • ನಗದು ರೂಪದಲ್ಲಿ ಅಥವಾ ಬ್ಯಾಂಕ್ ರವಾನೆ ಮೂಲಕ ಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ನೀವು ಹಣವನ್ನು ಸಲ್ಲಿಸಬಹುದು. ನಗದು ಹಣವನ್ನು ಗ್ರಾಮ ಸೇವಾ ಸಂಘದ ಸಮಿತಿಯ ಕೆಳಕಂಡ ಸದಸ್ಯರಿಗೆ ಕೊಡಬಹುದು.
  • ಬ್ಯಾಂಕ್ ಮೂಲಕ ವಿದ್ಯುನ್ಮಾನ ರವಾನೆ ಮಾಡಲು:

ಖಾತೆಯ ಹೆಸರು: C. A. ABHILASH / M. CHOCKALINGAM/ M. S. INDRAA

ಬ್ಯಾಂಕ್ ಹೆಸರು: ಇಂಡಿಯನ್ ಬ್ಯಾಂಕ್; ಶಾಖೆ: ಚಾಮರಾಜಪೇಟೆ, ಬೆಂಗಳೂರು

ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆ: 6597733761

IFSC: IDIB000C007

ಹಣ ಸಂದಾಯ ಮಾಡಿದ ನಂತರ, ವಿವರಗಳನ್ನು [email protected] ಅಥವಾ +9199800 43911 ಈ ಎರಡು ಸಂಪರ್ಕ ಕೇಂದ್ರಗಳಿಗೆ ಕಳುಹಿಸಲು ಮರೆಯದಿರಿ. ನಿಮ್ಮ ಸಂದೇಶದಲ್ಲಿ ಈ ವಿವರಗಳನ್ನು ಅಳವಡಿಸಲು ಮರೆಯದಿರಿ: <ಹೆಸರು> <ಮೊತ್ತ> <ದಿನಾಂಕ>

ಧನ್ಯವಾದಗಳು

                                                                                        ಪ್ರಸನ್ನ
ಹಿರಿಯ ಮಾರ್ಗದರ್ಶಿಗಳು, ಗ್ರಾಮ ಸೇವಾ ಸಂಘ

0

Leave a Reply

Your email address will not be published. Required fields are marked *