ಬಿಗ್​ಬಿ ಅಸ್ವಸ್ಥ..

ಥಗ್ಸ್​ ಆಫ್​ ಹಿಂದೂಸ್ತಾನ್​ ಶೂಟಿಂಗ್​ ವೇಳೆ ನಟ ಅಮಿತಾಬ್​ ಬಚ್ಚನ್​ ಕುಸಿದು ಬಿದ್ದಿದ್ದು,ಅನಾರೋಗ್ಯಕ್ಕೆ ಈಡಾಗಿದ್ದಾರೆ..ರಾಜಸ್ಥಾನದ ಜೋಧ್​ಪುರದಲ್ಲಿ ಶೂಟಿಂಗ್​ ನಡೆಯುತ್ತಿದ್ದು,ಜೋಧ್​ಪುರಕ್ಕೆ ಮುಂಬೈನಿಂದ ವೈದ್ಯರ ತಂಡ ತೆರಳಿದ್ದು,ಚಿಕಿತ್ಸೆ ನೀಡುತ್ತಿದ್ದಾರೆ..ಆಮೀರ್​ ಖಾನ್​ ನಿರ್ದೇಶನದ ಥಗ್ಸ್​ ಆಫ್​ ಹಿಂದೂಸ್ತಾನದಲ್ಲಿ ಅಮಿತಾಬ್ ಬಚ್ಚನ್​ ನಟಿಸುತ್ತಿದ್ರು..ನಿರಂತರ ಶೂಟಿಂಗ್​ನಿಂದ ಬಳಲಿರುವ ಕಾರಣ ಬಚ್ಚನ್​​ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ..​ಶೂಟಿಂಗ್​ಗೂ ಮುನ್ನ ಅಮಿತಾಬ್​ ತಮ್ಮ ಆರೋಗ್ಯ ಸರಿಯಾಗಿಲ್ಲ ಎಂದು ಬ್ಲಾಗ್​ನಲ್ಲಿ ಬರೆದುಕೊಂಡಿದ್ದರು.ಖಾಸಗಿ ವಿಮಾನದಲ್ಲಿ ಅಮಿತಾಬ್​ ಬಚ್ಚನ್​ರನ್ನು ಮುಂಬೈಗೆ ಕರೆದುಕೊಂಡು ಬರಲಾಗುತ್ತಿದೆ..ಅಮಿತಾಬ್​​ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳು ಅವರು ಶೂಟಿಂಗ್​ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಬಚ್ಚನ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

0

Leave a Reply

Your email address will not be published. Required fields are marked *