ಸರ್ಕಾರ ಪತನಕ್ಕೆ ಬಿಜೆಪಿ ಲಾಟರಿ, ಇಸ್ಪೀಟ್ ದಂಧೆಯವರಿಂದ ಹಣ ಸಂಗ್ರಹ

ಸರ್ಕಾರ ಪತನಕ್ಕೆ ಬಿಜೆಪಿ ಲಾಟರಿ, ಇಸ್ಪೀಟ್ ದಂಧೆಯವರಿಂದ ಹಣ ಸಂಗ್ರಹವಾಗ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬಿಬಿಎಂಪಿ ಕಡತ ಸುಟ್ಟು ಹಾಕಿದ ವ್ಯಕ್ತಿ ಹಣ ಸಂಗ್ರಹಣೆಯ ಕಿಂಗ್ ಪಿನ್ ಆಗಿದ್ದಾನೆ. ಇನ್ನು ಆಪರೇಶನ್ ಕಮಲಕ್ಕೆ ಬಿಜೆಪಿ ಅಡ್ವಾನ್ಸ್ ಪೇಮೆಂಟ್ ಕೊಡ್ತಿದೆ ಎಂದು ಹೇಳಿದ್ದಾರೆ.

ಅಪರೇಶನ್ ಕಮಲದ ಅಸಲಿ ಸತ್ಯ ಬಿಚ್ಚಿಟ್ರಾ ಸಿಎಂ..? ಸಿಎಂ ಹೇಳಿದ ಮೂವರು ಕಿಂಗ್ ಪಿನ್​ಗಳು ಇವರೇನಾ..? ವಿಜಯ್ ಕಿರಂಗದೂರು, ಫೈಟರ್ ರವಿ, ನಾರ್ವೆ ಸೋಮಶೇಖರ್ ಬಗ್ಗೆ ಪ್ರಸ್ತಾಪಿಸಿದ್ರಾ ಸಿಎಂ..? ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿಯೇ ಸುಳಿವು ಕೊಟ್ರಾ ಸಿಎಂ ಕುಮಾರಸ್ವಾಮಿ.

ಜಾರಕಿಹೊಳಿ ಟೀಂ ನಮ್ ಜೊತೆ ಸಂಪರ್ಕದಲ್ಲಿ ಇದ್ದಾರೆ, ಎಲ್ಲ ಸಚಿವರು ನನ್ನ ಸಂಪರ್ಕದಲ್ಲಿ ಜೊತೆ ಇದಾರೆ, ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ. ಬಿಜೆಪಿಯವರು ರೆಸಾರ್ಟ್ ಆದ್ರು ಮಾಡಲಿ ಗುಡಿಸಲಾದ್ರು ಮಾಡಲಿ, ಸದ್ಯ ಬಿಜೆಪಿಯವರು ಅಡ್ವಾನ್ಸ್ ಪೇಮೆಂಟ್ ಮಾಡ್ತಿದ್ದಾರೆ, ಕಮಲ ನಾಯಕರ ವಿರುದ್ದ ಹೆಚ್​ಡಿಕೆ ಆರೋಪ. ನಾನಾಗಿಯೇ ಬಿಜೆಪಿ ಶಾಸಕರನ್ನ ಸೆಳೆಯಲ್ಲ, ನಾನು ಮೈಸೂರು ಭಾಗದ ಬಿಜೆಪಿ ಶಾಸಕರನ್ನ ಟಚ್ ಮಾಡಲ್ಲ, ಬಿಜೆಪಿಯ ಕೆಲ ಶಾಸಕರ ಜೊತೆ ನನ್ನ ಹಳೆ ಸಂಬಂಧಗಳಿದೆ. ಸರ್ಕಾರ ಉಳಿಸಿಕೊಳ್ಳಲು ಏನ್ ಬೇಕೋ ಅದನ್ನ ಮಾಡ್ತಿನಿ, ಎಲ್ಲಕ್ಕಿಂತ ರಾಜ್ಯದ ಅಭಿವೃದ್ಧಿ ಮುಖ್ಯ ಆ ಬಗ್ಗೆ ನಾನು ಹೆಚ್ಚಿನ ಗಮನ ಕೊಡ್ತೀನಿ.

0

Leave a Reply

Your email address will not be published. Required fields are marked *