ರಾಜ್ಯದಾದ್ಯಂತ ಗೌರಿ ಗಣೇಶ ಹಬ್ಬ ಜೋರಾಗಿ ಆಚರಿಸಲಾಗುತ್ತಿದೆ

ನಾಡಿನೆಲ್ಲಡೆ ವಿಘ್ನ ವಿನಾಶಕನ ಆರಾಧನೆ – ಮನೆಮೆನೆಗಳಲ್ಲೂ ಗಣೇಶ ಹಬ್ಬ ಆಚರಣೆ – ಏಕದಂತನಿಗೆ ದೇಗುಲಗಳಲ್ಲಿ ವಿಶೇಷ ಪೂಜೆ. ಜೆ.ಪಿ.ನಗರದ ಪುಟ್ಟನಹಳ್ಳಿ ಬಳಿ ಇರುವ ಗಣೇಶನ ದೇವಸ್ಥಾನದಲ್ಲಿ ವಿಶೇಷವಾಗಿ ಗಣೇಶನ ಹಬ್ಬ ಆಚರಣೆ ಮಾಡಲಾಗುತ್ತಿದೆ. ಕಬ್ಬಿನ ಜಲ್ಲೆಯಲ್ಲಿ ಗಣೇಶನ ಮೂರ್ತಿಯನ್ನು ತಯಾರಿಸಿದ್ದಾರೆ. ಅದ್ರ ಜೊತೆಗೆ 4000 ಕೆಜಿ ತೂಕದ ಲಡ್ಡನ್ನು ಭಕ್ತರು ತಯಾರಿಸಿದ್ದಾರೆ. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಕೆಲವೊತ್ತಿನಲ್ಲಿ ಮಹಾಮಂಗಳಾರತಿ ಶುರುವಾಗಲಿದ್ದು, ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದವಾಗಿ ಪೊಂಗಲ್ ಮಾಡಲಾಗಿದೆ.

ಗಣೇಶ ಚತುರ್ಥಿ ಹಿನ್ನೆಲೆ ಬಸವನ ಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಭಕ್ತ ಸಾಗರವೇ ಹರಿದುಬರುತಿದೆ. ಮುಂಜಾಜೆ 3 ಗಂಟೆಯಿಂದಲೇ ಗಣೇಶನಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಕಾರ್ಯ ನಡೆಯಿತು. 2 ಸಾವಿರ ಲೀಟರ್ ಹಾಲಿನಿಂದ ಮೂರ್ತಿಗೆ ಮಜ್ಜನ ಮಾಡಲಾಯಿತು.ಹೂವು, ಖರ್ಜಿಕಾಯಿಂದ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಈವತ್ತು ಇಡೀ ದಿನ ದೇವಾಲಯ ತೆರೆದಿರುತ್ತದೆ. ದೇವಾಲಯಕ್ಕೆ ಬರುವ ಭಕ್ತರಿಗೆ ವಿಶೇಷ ಪ್ರಸಾದ್ ಸಿದ್ದಪಡಿಸಲಾಗಿದೆ.

0

Leave a Reply

Your email address will not be published. Required fields are marked *