ಪ್ರತೀ ಬಸ್ ತಂಗುದಾಣದಲ್ಲೂ ನಿರ್ಮಾಣವಾಗ್ತಾವೆ ಶೌಚಗೃಹಗಳು

ಮೂಲಸೌಕರ್ಯಗಳನ್ನು ಒದಗಿಸೋದ್ರಲ್ಲಿ ಬಿಬಿಎಂಪಿ ಸದಾ ಮುಂದು.. ಇದೀಗ ನಗರದ ಪ್ರತೀ ಬಸ್​ ತಂಗುದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಕ್ಕೆ 550 ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಿದೆ.. ಈ ಕುರಿತ ಫುಲ್​ ಡಿಟೇಲ್ಸ್​​ ಇಲ್ಲಿದೆ ನೋಡಿ.

ಇನ್ಮುಂದೆ ಬಸ್​ಗಾಗಿ ಕಾಯುವಾಗ ಜಲಭಾದೆ ಅಥವಾ ಮಲಭಾದೆ ಉಂಟಾದ್ರೆ ಸಾರ್ವಜನಿಕ ಶೌಚಗೃಹಗಳನ್ನು ಹುಡುಕಿಕೊಂಡು ಅಲೆಯಬೇಕಿಲ್ಲ.. ಏಕೆಂದರೆ ಬಸ್​ ನಿಲುಗಡೆ ತಾಣಗಳಲ್ಲಿ ಬಿಬಿಎಂಪಿ ಸುಸಜ್ಜಿತ ಶೌಚಾಲಯಗಳನ್ನು ಹಾಗೂ ಶುದ್ಧ ನೀರು ಒದಗಿಸಲು ಬಿಬಿಎಂಪಿ ಮುಂದಾಗಿದೆ. ನಗರದ 1 ಕೋಟಿ ಜನಸಂಖ್ಯೆಯಲ್ಲಿ 50 ಲಕ್ಷ ಕ್ಕೂ ಹೆಚ್ಚು ಜನ ಬಸ್​ಗಳಲ್ಲಿ ಓಡಾಡ್ತಾರೆ.. ಆದ್ರೆ ಈಗಿರೋದು ಕೇವಲ 587 ಶೌಚಾಲಯಗಳು ಮಾತ್ರ… ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ 550 ಬಸ್​ ಶೆಲ್ಟರ್​ ನಿರ್ಮಾಣ ಮಾಡುತ್ತಿದ್ದು ಈ ಎಲ್ಲಾ ಕಡೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಟೆಂಡರ್​ ಆಹ್ವಾನಿಸಲಾಗಿದೆ.

ಈಗಾಗಲೇ ಬಿಬಿಎಂಪಿಯ ಅಸಮರ್ಪಕ ನಿರ್ವಹಣೆಯ ಶೌಚಾಲಯಗಳು, ಹಾಗೂ ಕೊರತೆಯಿಂದ ಜನ ಬಯಲಲ್ಲೇ ಮೂತ್ರ ವಿಸರ್ಜನೆ ಮಾಡ್ತಿದ್ದಾರೆ.. ಇದರಿಂದ ಸಾರ್ವಜನಿಕ ಸ್ವಾಸ್ಥ್ಯವೂ ಹಾಳಾಗ್ತಿದೆ.. ಹೀಗಾಗಿ ಬಿಬಿಎಂಪಿ 250 ದೊಡ್ಡ ಶೌಚಗೃಹ ಮತ್ತು 100 ಇ ಟಾಯ್ಲೆಟ್​ ನಿರ್ಮಿಸಲು ನಿರ್ಧರಿಸಿದೆ. ಇಷ್ಟೇ ಅಲ್ಲದೆ ಬಸ್​ ಶೆಲ್ಟರ್​ ನಿರ್ಮಾಣಕ್ಕೆ ಟೆಂಡರ್​ ಕೊಡೋದ್ರೊಂದಿಗೆ ಅದೇ ಗುತ್ತಿಗೆದಾರರಿಗೆ ಶೌಚಗೃಹದ ನಿರ್ಮಾಣಕ್ಕೂ ಸೂಚಿಸಲಾಗಿದೆ. ಅಷ್ಟೇ ಅಲ್ಲ 100 ಲೀಟರ್​ ಸಾಮರ್ಥ್ಯದ ಕುಡಿಯುವ ನೀರಿನ ಘಟಕ ನಿರ್ಮಾಣವೂ ಖಡ್ಡಾಯವಾಗಿದೆ.. ಗುತ್ತಿಗೆದಾರರಿಗೆ ಜಾಹಿರಾತು ಅಳವಡಿಕೆಗೂ ಅವಕಾಶವಿದ್ದು ಇದ್ರಿಂದ ಪಾಲಿಕೆಗೆ ವಾರ್ಷಿಕ 40 ಸಾವಿರ ಶುಲ್ಕ ನೀಡುವ ಮೂಲಕ ಪಾಲಿಕೆಗೆ 2.2 ಕೋಟಿ ರುಪಾಯಿ ಲಾಭವಾಗಲಿದೆ. ಗುತ್ತಿಗೆದಾರರಿಗೆ 20 ವರ್ಷಗಳ ನಿರ್ವಹಣೆ ಹೊಣೆಯೊಂದಿಗೆ ಗುತ್ತಿಗೆ ನೀಡಲಾಗ್ತಿದೆ.

ಒಟ್ಟಿನಲ್ಲಿ ಈ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಸಾವಿರ ಬಸ್​ ನಿಲುಗಡೆಯಿದ್ದು 1 ಸಾವಿರ ಬಸ್​ ತಂಗುದಾಣಗಳಿವೆ.. ಇನ್ನೂ ಒಟ್ಟು 2212 ನಿರ್ಮಾಣದ ಉದ್ದೇಶ ಇದೆ.. ಬಿಬಿಎಂಪಿ ನೀಡುವ ಮೂಲಸೌಕರ್ಯಗಳನ್ನು ಬಳಸಿ ಸಾರ್ವಜನಿಕರೂ ನಗರದ ಸ್ವಚ್ಛತೆಗೆ ಕೈಜೋಡಿಸಬೇಕಿದೆ..

ಸೌಮ್ಯಶ್ರೀ ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *