ನೂತನ ನಾಯಕನಾಗಿ ಕಾಣಿಸಿಕೊಳ್ಳಲಿರುವ ಅಜಿಂಕ್ಯಾ..!

ಕ್ರಿಕೆಟ್​ ಲೋಕದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಆಕ್ರಮಣಕಾರಿ ಆಟದಿಂದಲೇ ಜಗತ್ತಿನ ಮನ ಗೆದ್ದಿದೆ. ಆದ್ರೀಗ ಈ ಆಟಗಾರರು ಗೆಲ್ಲಲು ಕ್ರೀಡಾ ಸ್ಪೂರ್ತಿಯನ್ನು ಸಹಗಾಳಿಗೆ ತೂರಬಲ್ಲರು, ಎಂಬುದಕ್ಕೆ ಪ್ರಕರಣವೊಂದು ಸಾಕ್ಷಿಯಾಗಿದ್ರಿಂದ, ಇದ್ರ ಬಿಸಿ ಐಪಿಎಲ್​​ಗೂ ತಟ್ಟಿದೆ.ಕೇಪ್​ಟೌನ್​​ ಅಂಗಳದಲ್ಲಿ ಬ್ಯಾನ್​ ಕ್ರಾಫ್ಟ್​ ತನ್ನ ಜೇಬಿನಿಂದ ಒಂದು ಹಾಳೆಯನ್ನು ತೆಗೆದು, ಚೆಂಡನ್ನು ವಿರೂಪಗೊಳಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಆಸೀಸ್​ ಆಟಗಾರರು ಮಾಡಿಕೊಂಡ ಪ್ಲಾನ್,​ ಎಲ್ಲ ಅಭಿಮಾನಿಗಳನ್ನು ಕೆರಳಿಸಿದ್ದು, ಟೀಕೆಗಳು ಗುರಿಯಾಗಿದೆ. ಜೊತಗೆ ಇದ್ರ ಬೆನ್ನಲ್ಲೆ ಬ್ಯಾನ್​ ಕ್ರಾಫ್ಟ್​ ಬೆನ್ನಿಗೆ ನಿಂತ ನಾಯಕ ಸ್ಟೀವನ್​ ಸ್ಮಿತ್ ಹಾಗೂ ಡೇವಿಡ್ ವಾರ್ನರ್​​ ಅವರ ಸ್ಥಾನಗಳ ತಲೆದಂಡವೂ ಆಗಿದೆ.

ಕಳ್ಳಾಟದ ವಿಡಿಯೋ ಎಲ್ಲೆಡೆ ತನ್ನ ಕಾರುಬಾರು ಶುರು ಮಾಡುತ್ತಿದ್ದಂತೆ, ಇತ್ತ ಐಪಿಎಲ್​ ಮಾಲೀಕರು ಸಹ ಕಾರ್ಯ ಪ್ರವೃತ್ತ ರಾಗಿದ್ದಾರೆ. ಅಂದಹಾಗೆ 11ನೇ ಆವೃತ್ತಿ ಐಪಿಎಲ್​​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು, ಸ್ಟಿವನ್​ ಸ್ಮಿತ್​ಗೆ ಹೆಗಲಿಗೆ ಹೊರಿಸಲಾಗಿತ್ತು. ಆದ್ರೆ, ಬಾಲ್​ ಟೆಂಪ್ಯರಿಂಗ್​ನಿಂದಾಗಿ ಇವರ ಸ್ಥಾನಕ್ಕೆ ಕುತ್ತು ಬಂದಿದೆ.ಸ್ಮಿತ್​ರಿಂದ ತೆರವಾದ ಸ್ಥಾನಕ್ಕೆ ರಾಜಸ್ಥಾನ ರಾಯಲ್ಸ್​ ಮಾಲೀಕರು, ಟೀಮ್ ಇಂಡಿಯಾದ ಸ್ಟಾರ್​ ಆಟಗಾರ ಅಜಿಂಕ್ ರಹಾನೆಗೆ ಪಟ್ಟ ಕಟ್ಟಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲಿ ರಹಾನೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡೇವಿಡ್​ ವಾರ್ನರ್​ ಸಹ, ಐಪಿಎಲ್​ನಲ್ಲಿ ಸನ್​​ ರೈಸರ್ಸ್​ ಹೈದರಾಬಾದ್​ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ವಿರುದ್ಧವೂ ಕ್ರಮವನ್ನು ಕೈಗೊಂಡ ಹಿನ್ನೆಲೆ, ಇವ್ರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆಯಿದೆ. ಆದ್ರೆ, ಈ ಬಗ್ಗೆ ಮಾಲೀಕರು ಇನ್ನು ಸ್ಪಷ್ಟ ನಿರ್ಧಾರವನ್ನು ಕೈಗೊಂಡಿಲ್ಲ. ಒಂದು ವೇಳೆ ಇವರನ್ನು ನಾಯಕ ಸ್ಥಾನದಿಂದ ಕೆಳಗೆ ಇಳಿಸಿದಲ್ಲಿ, ಟೀಮ್​ ಇಂಡಿಯಾದ ಓಪನರ್​​ ಶಿಖರ್​ ಧವನ್​ ತಂಡವನ್ನು ಮುನ್ನಡೆಸಲಿದ್ದಾರೆ.ಈ ಬಗ್ಗೆ ಮಾತನಾಡಿರುವ ಐಪಿಎಲ್​ ಅಧ್ಯಕ್ಷ ರಾಜೀವ ಶುಕ್ಲ, ಐಪಿಎಲ್​ನಲ್ಲಿ ಈ ಆಟಗಾರರು ಆಡುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ನಲ್ಲಿ ಅದೇನೆ ಆಗಲಿ, ಐಪಿಎಲ್​​ ಎಂಬ ಮನಿ ಮೇಕಿಂಗ್​ ಗೇಮ್​​ ತನ್ನ ವರ್ಚಸ್ಸು ಕಾಪಾಡಿಕೊಳ್ಳುವಂತಾಗಲಿ ಅನ್ನೋದು ಎಲ್ಲರ ಆಶಯವಾಗಿದೆ
======
ಮಹೇಶ್​ ಗುರಣ್ಣವರ, ಸ್ಪೊರ್ಟ್ಸ್​ ಬ್ಯೂರೋ, ಸುದ್ದಿಟಿವಿ ​

0

Leave a Reply

Your email address will not be published. Required fields are marked *