ಆಫ್ರಿಕಾ ವಿರುದ್ಧ ಅಖಾಡಕ್ಕೆ ಇಳಿತಾರಾ ರಹಾನೆ…

ಸದ್ಯ ಟೀಮ್​ ಇಂಡಿಯಾ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಆಡಲು ತಯಾರಾಗಿದೆ. ಅನುಭವಿ ಹಾಗೂ ತಂಡದ ಆಪತ್​ದ್ಭಾಂದವನಿಗೆ ತಂಡದಲ್ಲಿ ಆಡಲು ಚಾನ್ಸ್​ ಸಿಗ್ತಾ ಎಂಬ ಪ್ರಶ್ನೆಗಳು ಗರಿ ಗೆದರಿವೆ. ಟೀಮ್​ ಇಂಡಿಯಾದ ನಂಬಿಕಸ್ತ ಬ್ಯಾಟ್ಸ್​​ಮನ್​.. ಮೂರು ಮಾದರಿಯ ಕ್ರಿಕೆಟ್​ನಲ್ಲಿ ತಂಡದ ಭರವಸೆಯ ಪ್ಲೇಯರ್​.. ಆದ್ರೆ ಕಳೆದ ಕೆಲವು ಪಂದ್ಯಗಳಿಂದ ಈ ಅನುಭವಿಯ ಬೆಂಚ್​ ಕಾಯುತ್ತಿದ್ದಾರೆ.. ಟೆಸ್ಟ್​​ ಕ್ರಿಕೆಟ್​ನಲ್ಲಿ ವೈಟ್​ ಜೆರ್ಸಿ ತೊಟ್ಟು ಮೈದಾನಕ್ಕೆ ಎಂಟ್ರಿ ನೀಡುವ ಚೋಟಾ ಮುಂಬೈಕರ್​​, ಬ್ಲ್ಯೂ ಜೆರ್ಸಿಯಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ತಾ ಇಲ್ಲ. ಹೌದು ಅವರೇ ಅಜಿಂಕ್ಯ ರಹಾನೆ.

ಟೀಮ್​ ಇಂಡಿಯಾ ಪರ ಮೂರನೇ ಟೆಸ್ಟ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೇತರಿಕೆಯ ಬ್ಯಾಟಿಂಗ್ ನಡೆಸಿದ್ದ, ಅಜಿಂಕ್ಯ ರಹಾನೆ ನಾಯಕನ ಮನ ಕದ್ದಿದ್ದಾರೆ. ಜೋಹಾನ್ಸ್​​ಬರ್ಗ್​​​ನಲ್ಲಿ ನಡೆದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತ ಅಜಿಂಕ್ಯ ರಹಾನೆ ಟೀಮ್​ ಇಂಡಿಯಾದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದ್ರು. ಇನ್ನು ಇವರು ಈ ಬಾರಿ ಮೈದಾನಕ್ಕೆ ಎಂಟ್ರಿ ನೀಡ್ತಾರೆಂಬ ವಿಶ್ವಾಸ ಎಲ್ಲರಲ್ಲಿ ಮೂಡಿದೆ. ಟೀಮ್​​ ಇಂಡಿಯಾದ ಪರ ಈಗ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆದಿದ್ದು, ಈ ಸ್ಥಾನವನ್ನು ತುಂಬ ಬಲ್ಲ ಕ್ಷಮತೆಯನ್ನು ಅಜಿಂಕ್ಯ ರಹಾನೆ ಹೊಂದಿದ್ದಾರೆ. ಅಜಿಂಕ್ಯ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ರೆ, ತಂಡದ ಪರ ಮೈದಾನಕ್ಕೆ ಇಳಿದ್ರೆ ರನ್​​ಗಳನ್ನು ಗುಡ್ಡೆ ಹಾಕಿ ಎದುರಾಳಿಗಳನ್ನು ಕಾಡಬಲ್ಲರು.

ಇನ್ನು ಅಜಿಂಕ್ಯ ರಹಾನೆ ಕಳೆದ 4 ತಿಂಗಳಿನಿಂದ ಬ್ಲ್ಯೂ ಜೆರ್ಸಿ ತೊಟ್ಟುಕೊಂಡಿಲ್ಲ. ಅಕ್ಟೋಬರ್​​ 1 ರಂದು ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ್​​ನಲ್ಲಿ ಆಡಿದ್ದೇ ಕೊನೆಯ ಏಕದಿನ ಪಂದ್ಯ.. ವಿಶ್ವಕಪ್​​ ಗಾಗಿ ತಂಡವನ್ನು ಕಟ್ಟುತ್ತಿರುವ ಬಿಸಿಸಿಐ ಯುವಕರಿಗೆ ಮಣೆ ಹಾಕುತ್ತಿದೆ. ಆದರೆ ಅನುಭವಿಗಳ, ಅನುಭವವನ್ನು ಕೈ ಬಿಡುತ್ತಿಲ್ಲ.ಅಂದಹಾಗೆ ವಿರಾಟ್​ ಕೊಹ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆದ್ರು. ಇದರಿಂದ ಎಲ್ಲರೂ ಮುಂಬೈನ ಅಜಿಂಕ್ಯ ರಹಾನೆ ಶ್ರೀಲಂಕಾ ವಿರುದ್ಧ ಕಣಕ್ಕೆ ಇಳಿಯುತ್ತಾರೆ ಎಂದು ಎಲ್ಲರೂ ಊಹಿಸಿದ್ರು. ಆದ್ರೆ ಕ್ರೀಡಾಭಿಮಾನಿಗಳು ಹಾಕಿಕೊಂಡ ಲೆಕ್ಕಾಚಾರ ಎಲ್ಲಾ ಉಲ್ಟಾ ಆಗಿತ್ತು.ವಿಶ್ವಕಪ್​​ಗಾಗಿ ತಂಡವನ್ನು ಕಟ್ಟುತ್ತಿರುವ ಟೀಮ್​ ಇಂಡಿಯಾ ಅನುಭವಿಗಳ ಆಟವನ್ನು ಮರೆಯಬಾರದು. ವಿಶ್ವಕಪ್​ ಹಾಗೂ ಒತ್ತಡದ ಸನ್ನಿವೇಶದಲ್ಲಿ ಅನುಭವಿಗಳೇ ತಂಡದ ನೆರವಿಗೆ ಬರುವುದು.. ಇನ್ನಾದ್ರು ಅಜಿಂಕ್ಯ ರಹಾನೆರನ್ನು ಪರಿಗಣಿಸಿ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಲಿ ಎಂಬುದೇ ಅಭಿಮಾನಿಗಳ ಆಶಯ.

ವಿನಾಯಕ ಲಿಮಯೆ, ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *