ಏರ್​ ಇಂಡಿಯಾದಲ್ಲಿ ಶೇ.49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸಮ್ಮತಿ

ದೆಹಲಿ:ನಷ್ಟದಲ್ಲಿರುವ ಏರ್​ ಇಂಡಿಯಾದಲ್ಲಿ ಶೇ.49 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ವಿದೇಶಿ ವಿಮಾನಯಾನ ಸಂಸ್ಥೆಗಳು ಏರ್​ ಇಂಡಿಯಾದಲ್ಲಿ ಶೇ.49 ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದೆ.ಏರ್​ ಇಂಡಿಯಾದ ಮಾಲೀಕತ್ವ ಭಾರತೀಯರಲ್ಲಿಯೇ ಉಳಿಯಲಿದ್ದು,ಶೇ.49 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶವಿಲ್ಲ.ಹಾಗೆ ಸಿಂಗಲ್‌ ಬ್ರ್ಯಾಂಡ್ ರಿಟೇಲ್‌ ಕ್ಷೇತ್ರದಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ನೀಡಲು ಕೂಡ ಅನುಮೋದನೆ ದೊರೆತಿದೆ.

0

Leave a Reply

Your email address will not be published. Required fields are marked *