ಏರ್​ ಇಂಡಿಯಾ ಕೆಟ್ಟ ಪರಿಸ್ಥಿತಿಯಲ್ಲಿದೆ: ಏರ್ ಇಂಡಿಯಾ ನಿರ್ದೇಶಕ

ದೆಹಲಿ: ಏರ್​​ ಇಂಡಿಯಾ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಏರ್ ಇಂಡಿಯಾದ ನಿರ್ದೇಶಕ ಮತ್ತು ಬಿಜೆಪಿ ನಾಯಕ ಜಫರ್ ಇಸ್ಲಾಂ ಅಭಿಪ್ರಾಯಪಟ್ಟಿದ್ದಾರೆ. ಏರ್​ ಇಂಡಿಯಾ ವೇತನ ಪಾವತಿ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಏರ್ ಇಂಡಿಯಾದ ಪರಿಸ್ಥಿತಿ ಸುಧಾರಿಸಲು ನಾವು ಯತ್ನಿಸುತ್ತಿದ್ದೇವೆ. ವೇತನ ಪಾವತಿಯಾಗಿಲ್ಲ ಎಂಬುದು ಸುಳ್ಳು ವದಂತಿ ಎಂದ ಅವರು, ವೇತನ ಪಾವತಿ ತಡವಾಗಿರುವುದು ನಿಜ. ಆರ್ಥಿಕ ದುಃಸ್ಥಿತಿಯಿಂದ ಸಮಸ್ಯೆಯಾಗಿದೆ. ವೇತನ ಪಾವತಿ ಮುಂದುವರೆಯಲಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

0

Leave a Reply

Your email address will not be published. Required fields are marked *