ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ

ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್, ರಾಹುಲ್ ಬರಮಾಡಿಕೊಂಡ ರಾಜ್ಯ ಕಾಂಗ್ರೆಸ್ ನಾಯಕರು. ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ. ದೇಶಪಾಂಡೆ, ಡಿಕೆಶಿ, ಜಾರ್ಜ್ ಹಲವರಿಂದ ಸ್ವಾಗತ. ಮಧ್ಯಾಹ್ನ ಕಬ್ಬನ್ ಪಾರ್ಕ್ ನಲ್ಲಿ ಸಂವಾದ ನಡೆಸಲಿರುವ ರಾಹುಲ್.

ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆ ವಿಧಾನಸಭಾ ಉಪಚನಾವಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟಕೊಂಡು ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ವಿರುದ್ಧ ಕೇಳಿಬಂದಿರುವ ರಫೇಲ್ ಡೀಲ್ ಹಗರಣವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ರಾಹುಲ್ ತಂತ್ರ ರೂಪಿಸಿದ್ದು, ಇಂದು ರಾಹುಲ್ ಗಾಂಧಿ ಎಚ್ ಎಎಲ್ ನಿವೃತ್ತ ನೌಕರರೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 3.30ರ ವೇಳೆಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಂವಾದ ನಡೆಯಲಿದೆ. ಈ ಸಂಬಂಧ ಕಬ್ಬನ್​ ಪಾರ್ಕ್​​, ಮಿನ್ಸ್​ ಚೌಕ್​​ನಲ್ಲಿ ಬಾರಿ ಬಿಗಿ ಭದ್ರತೆ ವಹಿಸಲಾಗಿದೆ..ಭದ್ರತೆಗೆ 2 ಕೆಎಸ್ ಆರ್ ಪಿ ತುಕಡಿ,1 ಸಿ.ಆರ್ ತುಕಡಿ, ಸ್ಥಳದಲ್ಲಿ ಡಾಗ್ ಸ್ಕ್ವಾಡ್, ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ.

0

Leave a Reply

Your email address will not be published. Required fields are marked *