17 ವರ್ಷ ಬಳಿಕ ಮತ್ತೆ ಧಕ್​​ ಧಕ್​​ ಎನಿಸಲು ಬರ್ತಿದೆ ಈ ಜೋಡಿ

ಈ ಜೋಡಿ ಅಂದ್ರೆ ಬಾಲಿವುಡ್​ ಸಿನಿ ಪ್ರೇಮಿಗಳಿಗೆ ಅದೆಲ್ಲಿಲ್ಲದ ಪ್ರೀತಿ. 80-90ರ ದಶಕದಲ್ಲಿ ಇಡೀ ಬಾಲಿವುಡ್​ ಚಿತ್ರರಂಗವನ್ನ ಸೆಳೆದಿದ್ದ ಈ ಜೋಡಿ ಸತತ 20 ವರ್ಷಗಳ ನಂತರ ಮತ್ತೆ ಒಂದಾಗ್ತಾ ಇದೆ.

ಹೌದು​​..ಧಕ್ ಧಕ್ ಕರ್​ನೆ ಲಗಾ ಎಂದು ಪ್ರೇಕ್ಷಕರ ಹೃದಯಬಡಿತ ಹೆಚ್ಚಿಸಿದ್ದ ಮಾಧುರಿ ದೀಕ್ಷಿತ್, ಅನಿಲ್ ಕಪೂರ್ ಜೋಡಿ ಇದೀಗ 17 ವರ್ಷಗಳ ಬಳಿಕ ಮತ್ತೆ ಧಕ್ ಧಕ್ ಎನಿಸಲು ಬರ್ತಾ ಇದೆ. 80 ಹಾಗೂ 90ರ ದಶಕದಲ್ಲಿ ಹಿಂದಿ ಸಿನಿಪ್ರಿಯರನ್ನು ಮೋಡಿಗೊಳಿಸಿದ್ದ ಮಾಧುರಿ-ಅನಿಲ್ ಈಗ ದೊಡ್ಡ ಗ್ಯಾಪ್ ಬಳಿಕ ಜೊತೆಯಾಗಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಈ ವಿಷಯ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ.

ಹೌದು ಬೇಟಾ, ಜಮಾಯಿ ರಾಜಾ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದ ಅವರು ಹಿಂದಿ ಸಿನಿಪ್ರಿಯರ ಮನಸೂರೆಗೊಳಿಸಿದ್ರು. ಅದರಲ್ಲೂ ಅವರ ಅಭಿನಯದ ಬೇಟಾ ಚಿತ್ರದ ಧಕ್ ಧಕ್ ಕರ್​ನೆ ಲಗಾ ಹಾಡು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು. ಆದ್ರೆ 2000 ದಲ್ಲಿ ತೆರೆ ಕಂಡಿದ್ದ ಪುಕಾರ್ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ಈ ಜೋಡಿ ನಂತರದಲ್ಲಿ ಯಾವ ಚಿತ್ರದಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.

ಸದ್ಯ ಇದೀಗ ಇದೇ ಮ್ಯಾಜಿಕಲ್​ ಜೋಡಿ ಮತ್ತೆ ತೆರೆಹಂಚಿಕೊಳ್ಳಲಿದ್ದು, ಅದು ಕೂಡ ಧಮಾಲ್ ಸರಣಿಯ ಸಿನಿಮಾದಲ್ಲಿ ಅನ್ನೋದು ಮತ್ತೊಂದು ವಿಶೇಷ. ಹೌದು 2007ರ ಧಮಾಲ್​ ಸಿನಿಮಾದ ನಂತರ 2011ರಲ್ಲಿ ತೆರೆಕಂಡಿದ್ದ ಡಬಲ್​ ಧಮಾಲ್​ ಸಿನಿಮಾದ ನಂತರ ಇದೀಗ ಟೋಟಲ್​ ಧಮಾಲ್​ ಸಿನಿಮಾ ಬರ್ತಾ ಇದೆ. ನಿರ್ದೇಶಕ ಇಂದ್ರಕುಮಾರ್ ಇಬ್ಬರನ್ನೂ ಮತ್ತೆ ಒಟ್ಟಿಗೆ ತೆರೆ ಮೇಲೆ ತೋರಿಸಲು ಮುಂದಾಗಿದ್ದಾರೆ. ಅಂದರೆ ಅವರು ಆಕ್ಷನ್-ಕಟ್ ಹೇಳಲಿರುವ ಟೋಟಲ್ ಧಮಾಲ್ ಚಿತ್ರದಲ್ಲಿ ಮಾಧುರಿ ಮತ್ತು ಅನಿಲ್ ಜೋಡಿಯಾಗಿ ನಟಿಸಲಿದ್ದಾರೆ.

ಸದ್ಯ ಇದೊಂದು ಕಾಮಿಡಿ ಜಾನರ್​ ಇಟ್ಕೊಂಡು ಬರ್ತಿರೋ ಸಿನಿಮಾವಾಗಿದ್ದು, ಅನಿಲ್​ ಕಪೂರ್​ ಪತ್ನಿಯಾಗಿ ಮಾಧುರಿ ದೀಕ್ಷಿತ್​ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೆ ಅಲ್ಲದೇ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಜಯ್​ ದೇವ್​ಗನ್​ ಕೂಡ ಅಭಿನಯಿಸಲಿದ್ದಾರಂತೆ. ಒಟ್ಟಿನಲ್ಲಿ ಇದೊಂದು ಕಾಮಿಡಿ ಜಾನರ್​ ಸಿನಿಮಾ ಆಗಿರೋದ್ರಿಂದ ಮಾಧುರಿ-ಅನಿಲ್ ಜೋಡಿಯಿಂದ ಯಾವುದೇ ಧಕ್ ಧಕ್ ಅಪೇಕ್ಷಿಸುವಂತಿಲ್ಲ ಅಭಿಮಾನಿಗಳು.

ರಕ್ಷಾ ಕೂರ್ಗ್,​ ಫಿಲ್ಮ್​ ಬ್ಯೂರೋ ಸುದ್ದಿ ಟಿವಿ.

0

Leave a Reply

Your email address will not be published. Required fields are marked *