ಹಿರಿಯ ನಟ ಖಾದರ್ ಖಾನ್ ಕಾಲವಶ

ಟೊರ್ಯಾಂಟೊ: ಹಿಂದಿ ಚಿತ್ರರಂಗದ ಹಿರಿಯ ನಟ ಖಾದರ್ ಖಾನ್(81) ಕೆನಡಾದ ಟೊರಾಂಟೊದಲ್ಲಿ ನಿಧನರಾಗಿದ್ದಾರೆ. ಇಂದು ಮುಂಜಾನೆ ತಮ್ಮ ತಂದೆ ನಿಧನರಾಗಿದ್ದಾರೆ ಎಂದು ಖಾದರ್ ಖಾನ್ ಪುತ್ರ ಸರ್ಫಾಜ್ ಖಾನ್ ತಿಳಿಸಿದ್ದಾರೆ. ಕೆಲವು ತಿಂಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಿದೆವು. ಆದರೆ ಅವರು ನಿಧನರಾಗಿದ್ದಾರೆ ಎಂದಿರುವ ಅವರು, ನಮ್ಮ ತಂದೆ ಎಲ್ಲರನ್ನೂ ಪ್ರೀತಿಸುತ್ತಿದ್ದರು ಎಂದಿದ್ದಾರೆ. ಉಸಿರಾಟದ ತೊಂದರೆಯಿಂದ ಅನಾರೋಗ್ಯ ಪೀಡಿತರಾಗಿದ್ದ ಖಾದರ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ.

ಬಾಲಿವುಡ್​ನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು 250 ಚಿತ್ರಗಳಿಗೆ ಚಿತ್ರಕತೆಯನ್ನೂ ಬರೆದಿದ್ದಾರೆ. ಆಂಖೆ, ಮೈ ಖಿಲಾಡಿ ತು ಅನಾರಿ, ಜುದಾಯಿ, ಖೂನ್ ಭರಿ ಮಾಂಗ್, ಬಿವಿ ಹೊ ತೋ ಐಸಿ, ಬೋಲ್ ರಾಧಾ ಬೋಲ್, ಜುಡ್ವಾ ಸೇರಿದಂತೆ ಅನೇಕ ಪಾತ್ರಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. 45 ವರ್ಷಗಳ ಅವರ ಚಿತ್ರ ಜೀವನದಲ್ಲಿ ಅವರು ಸಾಜನ್ ಚಲೆ ಸಸುರಾಲ್, ಹೀರೋ ನಂ 1, ಕೂಲಿ ನಂ 1, ದುಲ್ಹೆ ರಾಜಾ, ಹಸೀನಾ ಮಾನ್ ಜಾಯೇಗಿ ಮೂಲಕ ಚಿರಪರಿಚಿತರಾಗಿದ್ದಾರೆ.

0

Leave a Reply

Your email address will not be published. Required fields are marked *