ನಟ ದರ್ಶನ್​​ರಿಂದ ಸಹಕಲಾವಿದನಿಗೆ ಕಪಾಳಮೋಕ್ಷ

ನಟ ದರ್ಶನ್​​ರಿಂದ ಸಹಕಲಾವಿದರಿಗೆ ಕಪಾಳಮೋಕ್ಷ, ಶಿವು ಅನ್ನೋ ಸಹಕಲಾವಿದನಿಗೆ ಹೊಡೆದ ದರ್ಶನ್. ‘ಯಜಮಾನ’ ಶೂಟಿಂಗ್ ಸೆಟ್ ನಲ್ಲಿ ಘಟನೆ, ತಾವರೆಕೆರೆ ವ್ಯಾಪ್ತಿಯ ನೈಸ್ ರಸ್ತೆ ಬಳಿ ಶೂಟಿಂಗ್ ನಡೆಯುತ್ತಿದ್ದಾಗ ಘಟನೆ. ಚಾಲೆಜಿಂಗ್​ ಸ್ಟಾರ್​ ದರ್ಶನ್ ತಾಳ್ಮೆ ಕಳೆದುಕೊಂಡಿದ್ದಾರೆ. ಯಜಮಾನ ಶೂಟಿಂಗ್​ ವೇಳೆ ಸಹ ಕಲಾವಿದನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಹಲ್ಲೆಗೊಳಗಾದ ಶಿವು ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆಯ ತಾವರೆಕೆರೆಯಲ್ಲಿ ಯಜಮಾನ ಶೂಟಿಂಗ್​ ನಡೆಯುತ್ತಿತ್ತು, ಈ ವೇಳೆ ಸಹ ಕಲಾವಿದ ಶಿವು ಕಪಾಳಕ್ಕೆ ಚಾಲೆಜಿಂಗ್​ ಸ್ಟಾರ್​ ದರ್ಶನ್​ ಹೊಡೆದಿದ್ಧಾರೆ.

0

Leave a Reply

Your email address will not be published. Required fields are marked *