ಅಚಲ್ ಕುಮಾರ್ ಜ್ಯೋತಿ ಚುನಾವಣಾ ಆಯೋಗದ ನೂತನ ಅಧ್ಯಕ್ಷ

ನವದೆಹಲಿ: ಅಚಲ್ ಕುಮಾರ್ ಜ್ಯೋತಿಯವರು ಚುನಾವಣಾ ಆಯೋಗದ ನೂತನ ಅಧ್ಯಕ್ಷರಾಗಿ ಜುಲೈ 6ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಚಲ್ ಕುಮಾರ್ ಅವರನ್ನು ಚುನಾವಣಾ ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ.

64 ವರ್ಷದ ಗುಜರಾತಿನ ಮಾಜಿ ಮುಖ್ಯ ಕಾರ್ಯದರ್ಶಿಯಾಗಿರುವ ಇವರನ್ನು ಚುನಾವಣಾ ಆಯೋಗದ ತ್ರಿಸದಸ್ಯರ ಪೈಕಿ ಒಬ್ಬರನ್ನಾಗಿ ಮೇ 7, 2015ರಂದು ಆಯ್ಕೆ ಮಾಡಿತ್ತು. 1975ರ ಐಎಎಸ್ ವೃಂದದ ಗುಜರಾತ್ ಮೂಲದ ಇವರು ಜನವರಿ 2013ರಲ್ಲಿ ಗುಜರಾತ್ ಮುಖ್ಯಕಾರ್ಯದರ್ಶಿ ಹುದ್ದೆಯಿಂದ, ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ನಿವೃತ್ತರಾಗಿದ್ದರು.

ಚುನಾವಣಾ ಆಯೋಗದ ಅಧ್ಯಕ್ಷರಾಗಿ ಅವರು ಒಂದು ವರ್ಷ ಸೇವೆ ಸಲ್ಲಿಸಲಿದ್ದು, 65ನೇ ವಯಸ್ಸಿಗೆ ನಿವೃತ್ತರಾಗಲಿದ್ದಾರೆ. ಆಯೋಗದ ಅಧ್ಯಕ್ಷಾವಧಿ ಐದು ವರ್ಷ ಅಥವಾ 65ರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

0

Leave a Reply

Your email address will not be published. Required fields are marked *