ಆ್ಯಂಬುಲೆನ್ಸ್​​​​ ಸಿಗದೆ ನರಳಾಡಿದ ಅಪಘಾತಕ್ಕೊಳಗಾದ ಸವಾರರು

ನೆಲಮಂಗಲ: ಹೆದ್ದಾರಿ ಅಪಘಾತದಲ್ಲಿ ತುಮಕೂರು ಮೂಲದ ಹರೀಶ್ ದೇಹ ಎರಡು ತುಂಡಾಗಿ ನರಳಾಡಿ ಮೃತ ಪಟ್ಟ ಘಟನೆ ಮಾಸುವ ಮುನ್ನವೆ ಮತ್ತೊಂದು ಅಪಘಾತ ಸಂಭವಿಸಿದೆ. ಈ ಘಟನೆ ಕೂಡ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಬಳಿ ನಡೆದಿದೆ. ಬೈಕ್​ಗೆ ಕ್ಯಾಂಟರ್ ವಾಹನ ಡಿಕ್ಕಿಯಾಗಿ, ಈ ಅಪಘಾತದ ವೇಳೆ ವಾಹನದಡಿ ಸಿಲುಕಿದ ಇಬ್ಬರು ಬೈಕ್ ಸವಾರರನ್ನ ಕ್ಯಾಂಟರ್ ನಾಲ್ಕೈದು ಮೀಟರ್ ದೂರ ಎಳೆದೊಯ್ದಿದೆ. ಈ ವೇಳೆ ಆ್ಯಂಬುಲೆನ್ಸ್ ಸಿಗದೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರಿಬ್ಬರು ನರಳಾಡಿದ ಅಮಾನುಷ ಘಟನೆ ನಡೆದಿದೆ. ನಂತರ ಸಾರ್ವಜನಿಕರು ಮಾನವೀಯತೆಯಿಂದ ನವಯುಗ ಟೋಲ್ ಕಂಪನಿಗೆ ಸೇರಿದ ವಾಹನದೊಂದಿಗೆ, ಗಂಭೀರ ಗಾಯವಾಗಿದ್ದ ಇಬ್ಬರು ಬೈಕ್ ಸವಾರರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕ್ಯಾಂಟರ್ ವಾಹನದ ಚಕ್ರಕ್ಕೆ ಸಿಲುಕಿದ ಒಬ್ಬ ಸವಾರನ ಬಲಗಾಲು ತುಂಡಾಗಿದೆ. ಸದ್ಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕ್ಯಾಂಟರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

0

Leave a Reply

Your email address will not be published. Required fields are marked *