ಮಾಜಿ ಮಂತ್ರಿ ಮನೆಯಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು..!

ಕಲಬುರಗಿ: ಮಾಜಿ ಮಂತ್ರಿ ಬಾಬಾರಾವ ಚವ್ಹಾಣ ಅವರ ನಿರ್ಮಾಣ ಹಂತದ ಮನೆಯಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಕಲಬುರಗಿಯ ವೆಂಕಟೇಶ್ವರ ನಗರದಲ್ಲಿ ನಡೆದಿದೆ. ಗೋಪಾಲ ರಾಠೋಡ(38) ಎಂಬಾತನೆ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಮೃತ ವ್ಯಕ್ತಿ, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬುಯ್ಯಾರ್ ತಾಂಡಾ ನಿವಾಸಿಯಾಗಿದ್ದು ಕಳೆದ ಹಲವು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಇಂದು ಮತ್ತೆ ಹೊಟ್ಟೆ ನೋವು ಹೆಚ್ಚಿಗೆ ಆಗಿರೋದ್ರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇನ್ನು ಈತ ಮಾಜಿ ಮಂತ್ರಿ ಬಾಬಾರಾವ ಚವ್ಹಾಣ ಅವರ ಬಂಜಾರ್ ಶಿಕ್ಷಣ ಸಂಸ್ಥೆಯಲ್ಲಿ ಜವಾನನಾಗಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದನು. ಇನ್ನು ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೊಟ್ಟೆ ನೋವಿನಿಂದಲೇ ಸಾವನ್ನಪ್ಪಿದ್ದಾನೆಯೋ ಅಥವಾ ಇನ್ನಾವ ಕಾರವಿದೆಯೋ ಎನ್ನುವುದರ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

0

Leave a Reply

Your email address will not be published. Required fields are marked *