ಬಿಹಾರದಲ್ಲಿ ವಿದ್ಯಾರ್ಥಿಗಳು, ಪ್ರಾಂಶುಪಾಲ, ಶಿಕ್ಷಕರಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ

ಪಾಟ್ನಾ: ಬಿಹಾರದ ಸರನ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ 18 ಜನ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಪ್ರಾಂಶುಪಾಲ, ಶಿಕ್ಷಕರು, ಶಿಷ್ಯ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಸತತ 7 ತಿಂಗಳು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಎಸ್​ಪಿ ಎಕೆ ಸಿಂಗ್, ಬಿಹಾರದಲ್ಲಿ ಅಪ್ರಾಪ್ತೆ ಮೇಲೆ ಸತತ 7 ತಿಂಗಳು ಅತ್ಯಾಚಾರದ 19 ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ. ಸರನ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಅಪ್ರಾಪ್ತೆಯ ಮೇಲೆ ಪ್ರಾಂಶುಪಾಲ, ಶಿಕ್ಷಕರು, ವಿದ್ಯಾರ್ಥಿಗಳು ಸತತ ಏಳು ತಿಂಗಳು ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ದೂರು ನೀಡಿರುವ ಬಾಲಕಿ, ಡಿಸೆಂಬರ್ 2017ರಲ್ಲಿ ವಿದ್ಯಾರ್ಥಿ ಮೊದಲು ತನ್ನ ಮೇಲೆ ಅತ್ಯಾಚಾರ ಎಸಗಿದ. ಅತ್ಯಾಚಾರದ ದೃಶ್ಯವನ್ನು ಸೆರೆಹಿಡಿದ ಬೆದರಿಸಿದ ಎಂದಿದ್ದಾಳೆ. ನಂತರ ವಿದ್ಯಾರ್ಥಿಗಳು ಕೂಡ ಅತ್ಯಾಚಾರ ಎಸಗಿದರು. ಈ ವಿಷಯವನ್ನು ಪ್ರಾಂಶುಪಾಲರಿಗೆ ತಿಳಿಸಿದ ನಂತರ ಪ್ರಾಂಶುಪಾಲರು ಮತ್ತು ಇತರ ಇಬ್ಬರು ಶಿಕ್ಷಕರು ದೌರ್ಜನ್ಯ ನಡೆಸಿದರು ಎಂದು ದೂರಲಾಗಿದೆ. ಬಾಲಕಿಯನ್ನು ಸದರ್ ಆಸ್ಪತ್ರೆಗೆ ಹಾಜರುಪಡಿಸಲಾಗಿದ್ದು, ವೈದ್ಯಕೀಯ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಬೇಕಿದೆ.

0

Leave a Reply

Your email address will not be published. Required fields are marked *