6ನೇ ವೇತನ ಆಯೋಗ: ಶೇ.20 ರಿಂದ 30ರಷ್ಟು ವೇತನ ಹೆಚ್ಚಳ ಸಾಧ್ಯತೆ

ಬೆಂಗಳೂರು: ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ವಿಚಾರ ಸಂಬಂಧ ಸರ್ಕಾರ ರಚಿಸಿದ್ದ 6ನೇ ವೇತನ ಆಯೋಗ ವರದಿಯನ್ನು ಇಂದು ಸಲ್ಲಿಸಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವೇತನ ಆಯೋಗದ ಅಧ್ಯಕ್ಷ ಎಂ.ಆರ್‌. ಶ್ರೀನಿವಾಸಮೂರ್ತಿ ವರದಿಯನ್ನು ಸಲ್ಲಿಸಿದ್ದಾರೆ. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯದಲ್ಲಿರುವ 5.20 ಲಕ್ಷ ಸರ್ಕಾರಿ ನೌಕರರಿಗೆ ಗಣನೀಯವಾಗಿ ಶೇ.30 ರಷ್ಟು ವೇತನ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳು, ಪದವಿ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳಲ್ಲಿನ ನೌಕರರಿಗೆ ಸುಮಾರು 73.000 ಬೋಧಕೇತರ ಸಿಬ್ಬಂದಿಗೂ ಇದು ಅನ್ವಯವಾಗಲಿದೆ.

0

Leave a Reply

Your email address will not be published. Required fields are marked *