ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 6 ಬಾರಿ ಸರ್ಜಿಕಲ್ ಸ್ಟ್ರೈಕ್:  ರಾಜೀವ್ ಶುಕ್ಲಾ

ದೆಹಲಿ: ಮನಮೋಹನ್ ಸಿಂಗ್‍ ಪ್ರಧಾನಿಯಾಗಿದ್ದಾಗ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಹೇಳಿದರು. ಜೂನ್ 19, 2008ರಂದು ಜಮ್ಮು ಕಾಶ್ಮೀರದ ಪೂಂಛ್‍ಬಳಿ ಭಟ್ಟಲ್ ಸೆಕ್ಟರ್‍ ಬಳಿ, ಆಗಸ್ಟ್ 30 – ಸೆಪ್ಟಂಬರ್ 1, 2011ರವರೆಗೆ ನೀಲಂ ನದಿ ಕಣಿವೆ ಬಳಿಯ ಶಾರದಾ ಸೆಕ್ಟರ್ ಸುತ್ತಮುತ್ತ ನಿರ್ದಿಷ್ಟ ದಾಳಿ ನಡೆಸಲಾಗಿತ್ತು. ನಂತರ ಜನವರಿ 6, 2013ರಂದು ಸಾವನ್ ಪಾತ್ರ ಚೆಕ್‍ಪೋಸ್ಟ್ ಬಳಿ ದಾಳಿ ನಡೆದಿತ್ತು. ಜುಲೈ 27, 28, 2013ರಂದು ನಜಪೀರ್ ಸೆಕ್ಟರ್‍ ಬಳಿ ಸೇನೆ ದಾಳಿ  ನಡೆಸಿತ್ತು. ಆಗಸ್ಟ್ 6, 2013ರಂದು ಮತ್ತು ಜನವರಿ 14, 2014ರಂದು ನೀಲಂ ಕಣಿವೆಯಲ್ಲಿ ನಿರ್ದಿಷ್ಟ ದಾಳಿ ನಡೆಸಲಾಗಿತ್ತು ಎಂದು ಅವರು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

0

Leave a Reply

Your email address will not be published. Required fields are marked *