ಐದನೇ ಟೆಸ್ಟ್​ ಎರಡನೇ ದಿನ ಇಂಗ್ಲೆಂಡ್ ಫುಲ್ ಡಾಮಿನೇಟ್

ಪಂದ್ಯದ ಮೊದಲ ದಿನ 7 ವಿಕೆಟ್​ ನಷ್ಟಕ್ಕೆ 198 ರನ್​ ಗಳಿಸಿದ್ದ ಇಂಗ್ಲೆಂಡ್​ ಎರಡನೇ ದಿನ ಮತ್ತಷ್ಟು ರನ್​ ಗಳಿಸಿ ಗೌರವಯುತ ಮೊತ್ತ ದಾಖಲಿಸುವ ಯೋಜನೆಯೊಂದಿಗೆ ಕಣಕ್ಕಿಳಿತು. ಆದ್ರೆ ದಿನದಾಟ ಆರಂಭಿಸಿದ ಕೆಲ ಹೊತ್ತಿನಲ್ಲೇ ವೇಗಿ ಜಸ್ಪ್ರೀತ್​ ಬೂಮ್ರಾ ಇಂಗ್ಲೆಂಡ್​ ಆಘಾತ ನೀಡಿದ್ರು.15 ರನ್​ ಬಾರಿಸಿದ್ದ ರಶೀದ್​ ಬೂಮ್ರಾ ಎಸೆತದಲ್ಲಿ ಎಲ್​ಬಿಡಬ್ಲೂ ಬಲೆಗೆ ಬಿದ್ರು. ಇದರಿಂದ ಟೀಮ್​ ಇಂಡಿಯಾ ಆರಂಭಿಕ ಯಶಸ್ಸು ಸಾಧಿಸಲು ಸಾಧ್ಯವಾಯ್ತು. ಇನ್ನೆರೆಡು ವಿಕೆಟ್​ಗಳನ್ನ ಆದಷ್ಟು ಬೇಗ ಉರುಳಿಸಿ ರೂಟ್ ಪಡೆಯನ್ನ 250ರೊಳಗೆ ಕಟ್ಟಿಹಾಕುವ ಲೆಕ್ಕಚಾರದಲ್ಲಿ ಟೀಮ್ ಇಂಡಿಯಾ ಇತ್ತು. ಆದ್ರೆ ವಿರಾಟ್ ಪಡೆಯ ಈ ಲೆಕ್ಕಾಚಾರವನ್ನ ಜೋಸ್​ ಬಟ್ಲರ್​ ಹಾಗೂ ಸ್ಟುವರ್ಟ್​ ಬ್ರಾಡ್ ಬುಡಮೇಲು ಮಾಡಿದ್ರು.

ಭಾರತದ ದಾಳಿಯನ್ನ ಸಮರ್ಥವಾಗಿ ಎದುರಿಸದ ಈ ಇಬ್ಬರು ಬ್ಯಾಟ್ಸ್​​​ಮನ್ಸ್​​, ಮೊದಲ ಸೆಷೆನ್​ ಪೂರ್ತಿ ಬ್ಯಾಟ್​ ಬೀಸಿದ್ರು. ಬಟ್ಲರ್ ಬಿರುಸಿನ ಆಟದ ಮೂಲಕ ವೇಗವಾಗಿ ರನ್ ಕಲೆಹಾಕಿದ್ರೆ. ಬ್ರಾಡ್​ ಎಚ್ಚರಿಕೆಯ ಆಟದ ಮೂಲಕ ಬಟ್ಲರ್​ಗೆ ತಕ್ಕ ಸಾಥ್ ನೀಡಿದ್ರು. ಈ ಜೋಡಿಯನ್ನ ಬೇರ್ಪಡಿಸಲು ನಾಯಕ ಕೊಹ್ಲಿ ಮಾಡಿದ ಯಾವುದೇ ತಂತ್ರಗಳು ವರ್ಕೌಟ್ ಆಗಲಿಲ್ಲ. ಟೀಮ್ ಇಂಡಿಯಾ ಬೌಲರ್​ಗಳು ಇವರ ವಿಕೆಟ್ ಪಡೆಯಲು ಸಾಕಷ್ಟು ಹೆಣಗಾಟ ನಡೆಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

ಸರಣಿಯಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಬಟ್ಲರ್​ ಕೊನೆಯ ಪಂದ್ಯದಲ್ಲೂ ತಂಡಕ್ಕೆ ನೆರವಾದ್ರು. ಬ್ರಾಡ್ ಜೊತೆಗೂಡಿ 9ನೇ ವಿಕೆಟ್​ಗೆ ಮಹತ್ವದ 98 ರನ್​ಜೊತೆಯಾಟವಾಡುವ ಮೂಲಕ 250ರ ಗಡಿ ಮುಟ್ಟೋದೆ ಡೌಟ್​ ಆಗಿದ್ದ ತಂಡದ ಮೊತ್ತವನ್ನ 300ರ ಗಡಿ ದಾಟಿಸಿದ್ರು. ಈ ಜೊತೆಯಾಟದ ವೇಳೆ ಬಟ್ಲರ್​ ಅರ್ಧಶತಕ ಪೂರೈಸಿಕೊಂಡ್ರು. ಲಂಚ್​ ಬ್ರೇಕ್​ನ ನಂತರ ಟೀಮ್ ಇಂಡಿಯಾ ಕೊನೆಗೂ ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಸಕ್ಸಸ್ ಆಯ್ತು. 38 ರನ್​ಗಳಿಸಿದ್ದ ಬ್ರಾಡ್​ ರವೀಂದ್ರಾ ಜಡೇಜಾ ಎಸೆತದಲ್ಲಿ ರಾಹಲ್ ಕ್ಯಾಚ್​ ನೀಡಿದ್ರು. ರಾಹುಲ್ ಈ ಕ್ಯಾಚ್ ಪಡೆಯೋದರ ಮೂಲಕ ನೂತನ ದಾಖಲೆ ಬರೆದ್ರು. ಅಲ್ಲದೇ ಭಾರತದ ಮಾಜಿ ಕ್ರಿಕೆಟರ್​, ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ದಾಖಲೆಯನ್ನ ಸರಿಗಟ್ಟಿದ್ರು.

ದ್ರಾವಿಡ್ 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 13 ಕ್ಯಾಚ್​ಗಳನ್ನ ಹಿಡಿದಿದ್ರು. ಈ ಮೂಲಕ ಸರಣಿವೊಂದರಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ದಾಖಲೆ ನಿರ್ಮಿಸಿದ್ದರು. ಈಗ ಕೆಎಲ್ ಕೂಡ ಪ್ರಸ್ತುತ ಸರಣಿಯಲ್ಲಿ 13 ಕ್ಯಾಚ್ ಪಡೆದು ದ್ರಾವಿಡ್​ಗೆ ಜೊತೆಯಾಗಿದ್ದಾರೆ. ಬ್ರಾಡ್​ ನಿರ್ಗಮನದ ನಂತರವೂ ಬಟ್ಲರ್ ವೇಗದ ಆಟದ ತಂಡದ ಸ್ಕೋರ್ ಹೆಚ್ಚಿಸಿದ್ರು. ಅಂತಿಮವಾಗಿ 89 ರನ್​ ಬಾರಿಸಿದ ಬಟ್ಲರ್​ ಕೂಡ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಇಂಗ್ಲೆಂಡ್ 322 ರನ್​ಗೆ ಆಲೌಟ್ ಆಯ್ತು. ಭಾರತದ ಪರ ಜಡೇಜಾ 4, ಬೂಮ್ರಾ ಹಾಗೂ ಇಶಾಂತ್ ಶರ್ಮಾ ತಲಾ 3 ವಿಕೆಟ್ ಪಡೆದ್ರು.

ಮೊದಲ ಇನ್ನಿಂಗ್ಸ್​​ ಆರಂಭಿಸಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಸರಣಿಯಲ್ಲಿ ಬ್ಯಾಡ್ ಫಾರ್ಮ್​ನಲ್ಲಿರುವ ಧವನ್ ಬ್ರಾಡ್​ ಎಸೆದ ಎರಡನೇ ಓವರ್​ನಲ್ಲೇ ಎಲ್​ಬಿ ಬಲೆಗೆ ಬಿದ್ರು. ಈ ಮೂಲಕ ತಂಡ ಆರಂಭಿಕ ಆಘಾತಕ ಅನುಭವಿಸುವಂತೆ ಮಾಡಿದ್ರು. ಎರಡನೇ ವಿಕೆಟ್​ಗೆ ಕೆಎಲ್​ ರಾಹುಲ್ ಹಾಗೂ ಶಿಖರ್​ ಧವನ್​ ನಿಧಾನವಾಗಿ ಇನ್ನಿಂಗ್ಸ್​ ಕಟ್ಟತ್ತಾ ಸಾಗಿದ್ರು.ಪ್ರತಿ ಎಸೆತವನ್ನೂ ಎಚ್ಚರಿಕೆಯಿಂದ ಎದುರಿಸಿದ್ರು. ಸರಣಿಯಲ್ಲಿ ತಮ್ಮ ಖ್ಯಾತಿಗೆ ತಕ್ಕ ಆಟವಾಡುವಲ್ಲಿ ಫೇಲ್ ಆಗಿರುವ ರಾಹುಲ್, ನಿನ್ನೆ ಉತ್ತಮ ಆಟದ ಮೂಲಕ ಕ್ರೀಸ್​​ನಲ್ಲಿ ನೆಲಕಚ್ಚಿ ನಿಲ್ಲುವ ಭರವಸೆ ಮೂಡಿಸಿದ್ರು. ಆಕರ್ಷಕ ಶಾಟ್​ಗಳ ಮೂಲಕ ಬಿಗ್​ ಇನ್ನಿಂಗ್ಸ್​ ಆಡುವ ಸೂಚನೆ ನೀಡಿದ್ರು.

ಆದ್ರೆ 37 ರನ್​ಗಳಿಸಿದ್ದಾಗ ರಾಹುಲ್ ಸ್ಯಾಮ್ ಕರಾನ್​ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ಪೆವಿಲಿಯನ್​ ದಾರಿ ಹಿಡಿದ್ರು. ಮೂರನೇ ವಿಕೆಟ್​ಗೆ ನಾಯಕ ಕೊಹ್ಲಿ ಹಾಗೂ ಪೂಜಾರಾ ಕೂಡ ಉತ್ತಮವಾಗಿ ಬ್ಯಾಟಿಂಗ್ ಮೂಲಕ ಗಮನಸೆಳೆದ್ರು. ಅಲ್ಲದೇ ದೊಡ್ಡ ಜೊತೆಯಾಟದ ನಿರೀಕ್ಷೆ ಹುಟ್ಟಿಸಿದ್ರು. ಈ ಹಂತದಲ್ಲಿ ಪೂಜಾರಾ ಜೇಮ್ಸ್​ ಆ್ಯಂಡರ್​ಸನ್ ಎಸೆತದಲ್ಲಿ ಕೀಪರ್ ಬೇರ್​ಸ್ಟೋಗೆ ಕ್ಯಾಚ್ ನೀಡಿ ಔಟಾದ್ರು.

ಪೂಜಾರಾ ನಂತರ ಬಂದ ಅಜಿಂಕ್ಯಾ ರಹಾನೆ ಡಕೌಟ್ ಆದ್ರು. ಐದನೇ ವಿಕೆಟ್​ಗೆ ಕೊಹ್ಲಿ ಹಾಗೂ ಡೆಬ್ಯೂ ಪ್ಲೇಯರ್ ಹನುಮ ವಿಹಾರಿ, ತಂಡವನ್ನ ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ಮಾಡಿದ್ರು. 51 ರನ್ ಕಾಣಿಕೆ ನೀಡಿದ್ರು. ಕೊಹ್ಲಿ ಎಂದಿನ ಶೈಲಯಲ್ಲಿ ಬ್ಯಾಟಿಂಗ್ ನಡೆಸಿದ್ರೆ. ವಿಹಾರಿ ತಮ್ಮ ಮೊದಲ ಅಂತರಾಷ್ಟ್ರೀಯ ಇನ್ನಿಂಗ್ಸ್​​ನಲ್ಲಿ ಅಳೆದು ತೂಗಿ ಆಡಿದ್ರು. ಈ ವೇಳೆ ಅರ್ಧಶಕತದ ಹೊಸ್ತಿಲಲ್ಲಿ ಕೊಹ್ಲಿ ಎಡವಿದ್ರು. ಬೆನ್​ ಸ್ಟೋಕ್ಸ್​ ಎಸೆತದಲ್ಲಿ ಕವರ್ ಡ್ರೈ ಬಾರಿಸಲು ಹೋದ ಕೊಹ್ಲಿ ಸ್ಲಿಪ್​ನಲ್ಲಿ ಕುಕ್​ಗೆ ಕ್ಯಾಚ್ ನೀಡಿ ಭಾರವಾದ ಹೆಜ್ಜೆಯೊಂದಿಗೆ ಪೆವಿಲಿಯನ್​ನತ್ತ ಮುಖ ಮಾಡಿದ್ರು. ರಿಷಬ್​ ಪಂತ್​ ಆಟ 5 ರನ್​ಗೆ ಕೊನೆಯಾಯ್ತು.

ದಿನದಾಟ ಅಂತ್ಯಕ್ಕೆ ಟೀಮ್ ಇಂಡಿಯಾ 6 ವಿಕೆಟ್​ ನಷ್ಟಕ್ಕೆ 178 ರನ್ ಕಲೆಹಾಕಿದೆ. 23 ರನ್​ ಬಾರಿಸಿರುವ ವಿಹಾರಿ,8 ರನ್ ಗಳಿಸಿರುವ ಜಡೇಜಾ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಆ್ಯಂಡರ್​ ಸನ್ ಹಾಗೂ ಸ್ಟೋಕ್ಸ್ ತಲಾ ಎರಡು ವಿಕೆಟ್​ ಪಡೆದ್ರ. ಇಂದು ಭಾರತದ ಬ್ಯಾಟ್ಸ್​​ಮನ್​ಗಳ ಆಟದ ಮೇಲೆ ಪಂದ್ಯದಲ್ಲಿ ಟೀಮ್ ಇಂಡಿಯಾ ಹಿಡಿತ ಸಾಧಿಸುತ್ತಾ ಇಲ್ಲವೇ ಅನ್ನೋದು ನಿರ್ಧಾರವಾಗಲಿದೆ.

1+

Leave a Reply

Your email address will not be published. Required fields are marked *