ನೀವು ಮನೆಯಲ್ಲಿಯೇ ತಯಾರಿಸಬಹುದಾದ 5 ಹೇರ್​​ ಕಂಡೀಷನರ್​​​

ವಾತಾವರಣದಲ್ಲಿನ ಎಲ್ಲಾ ರೀತಿಯ ಮಾಲಿನ್ಯ, ಕೊಳಕು ಮತ್ತು ಜೀವಾಣುಗಳ ಜೊತೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಕಠಿಣ ಕೆಲಸವೇ ಸರಿ. ಮಾರುಕಟ್ಟೆಯಲ್ಲಿ ಕೂದಲ ರಕ್ಷಣೆಗೆಂದೇ ಅನೇಕ ರೀತಿಯ ಕಂಡೀಷನರ್​​​ ಉತ್ಪನ್ನಗಳಿವೆ ಆದರೆ ಅವು ರಾಸಾಯನಿಕಗಳ ಮೇಲೆ ಅವಲಂಭಿತವಾಗಿರುವುದರಿಂದ ಅದರಿಂದ ಅಷ್ಟೇನು ಪರಿಣಾಮಕಾರಿ ಫಲಿತಾಂಶ ಸಿಗುವುದಿಲ್ಲ. ಇದರಲ್ಲಿನ ಪೌಷ್ಠಿಕಾಂಶವು ಒಂದು ಭಾಗವಾಗಿದೆ, ಆದರೆ ಅದಕ್ಕಿಂತಲೂ ಹೆಚ್ಚಿನ ಅವಶ್ಯಕತೆ ನಮ್ಮ ಕೂದಲಿಗೆ ಬೇಕಾಗಿರುತ್ತದೆ. ಹಾಗಾಗಿ ನಮ್ಮ ಅಡುಗೆ ಕೋಣೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಿ ಸುಲಭವಾಗಿ ಕಂಡೀಷನರ್​​​ ತಯಾರಿಸಬಹುದು. ನಿಮ್ಮ ಹಾಳಾದ ಕೂದಲನ್ನು ನೈಸರ್ಗಿಕವಾಗಿ, ಮನೆಯಲ್ಲಿಯೇ ತಯಾರಿಸಿದ ಕಂಡೀಷನರ್​​ನೊಂದಿಗೆ ಹೇಗೆ ಮರಳಿ ತರಬಹುದು ಎಂಬುದು ಇಲ್ಲಿದೆ ನೋಡಿ.

1. ತೆಂಗಿನಕಾಯಿ ಮತ್ತು ಜೇನಿನ ಕಂಡೀಷನರ್​​:

ಪದಾರ್ಥಗಳು:-

 • ತೆಂಗಿನ ಎಣ್ಣೆ
 • ಜೇನು
 • ಮೊಸರು
 • ರೋಸ್​​ ವಾಟರ್​​
 • ನಿಂಬೆ ರಸ

ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಸಿ ಮಿಶ್ರಣ ಮಾಡಿ. ನಂತರ ಅದನ್ನು ಕೂದಲಿಗೆ ಹಚ್ಚಿ 10 ರಿಂದ 15 ನಿಮಿಷಗಳವರೆಗೆ ಬಿಟ್ಟು ನೀರಿನಿಂದ ತೊಳೆಯಿರಿ.

2. ಮೊಟ್ಟೆಯ ಕಂಡಿಷನರ್:

ಇದಕ್ಕೆ ಕೇವಲ 2 ಮೊಟ್ಟೆಯ ಹಳದಿ ಭಾಗದ ಅಗತ್ಯವಿದೆ. ಎರಡು ಮೊಟ್ಟೆಯನ್ನು ಒಡೆದು ಅದರ ಹಳದಿ ಭಾಗವನ್ನು ಸರಿಯಾಗಿ ತೆಗೆದು ಪಕ್ಕಕ್ಕೆ ಇಡಿ. ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ ಇದನ್ನು ಸಂಪೂರ್ಣವಾಗಿ ನಿಮ್ಮ ಕೂದಲಿಗೆ ಅನ್ವಯಿಸಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ. ಇದರ ವಾಸನೆಯನ್ನು ತೊಡೆದುಹಾಕಲು ಇದನ್ನು ಅನ್ವಯಿಸಿಕೊಳ್ಳುವ ಮೊದಲು ಒಂದು ಟೀ ಸ್ಪೂನ್​ನಷ್ಟು ಸಾಸಿವೆ ತೈಲ ಸೇರಿಸಿ.

3. ಸೇಬಿನ ಸೈಡರ್ ವಿನೆಗರ್ ಕಂಡಿಷನರ್:

ಪದಾರ್ಥಗಳು:-

 • 2 ಟೇಬಲ್​​ ಸ್ಪೂನ್​​ ಸೇಬಿನ ಸೈಡರ್​​ ವಿನೆಗರ್​​​
 • 1 ಟೇಬಲ್​ ಸ್ಪೂನ್​​ ಜೇನುತುಪ್ಪ
 • ನೀರು

ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಸೇರಿಸಿ ಮಿಶ್ರಣ ಮಾಡಿ. ನಿಮ್ಮ ಕೂದಲಿಗೆ ಶಾಂಪೂ ಹಚ್ಚಿದ ನಂತರ ನಂತರ ಕಂಡೀಷನರ್​​ ಅನ್ವಯಿಸಿ. ಕಂಡೀಷನರ್​​​ ಹಚ್ಚಿದ ನಂತರ ನಿಮ್ಮ ಕೂದಲನ್ನು ತೊಳೆಯಬೇಡಿ.

4. ಬಾಳೆಹಣ್ಣು, ಜೇನುತುಪ್ಪ ಮತ್ತು ಆಲಿವ್ ತೈಲ:

ಪದಾರ್ಥಗಳು:-

 • ಒಂದು ಬಾಳೆಹಣ್ನು
 • 2 ಟೇಬಲ್​ ಸ್ಪೂನ್​ ಜೇನು
 • 2 ಟೇಬಲ್​ ಸ್ಪೂನ್ ಆಲಿವ್​​ ತೈಲ

ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಮೃದುವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ನಿಮ್ಮ ಕೂದಲೆಗೆ ಚೆನ್ನಾಗಿ ಅನ್ವಯಿಸಿ ಅರ್ಧ ಘಂಟೆಯವರೆಗೆ ಹಾಗೆಯೇ ಬಿಟ್ಟು ನಂತರ ಶಾಂಪೂ ಜೊತೆಗೆ ಚೆನ್ನಾಗಿ ತೊಳೆಯಿರಿ.

5. ಮೊಟ್ಟೆ, ಮೊಸರು ಮತ್ತು ಮೇಯೊ ಕಂಡಿಷನರ್:

ಪದಾರ್ಥಗಳು:-

 • ಒಂದು ಮೊಟ್ಟೆ
 • ಒಂದು ಕಪ್​​ ಮೇಯೊ
 • ಒಂದು ಕಪ್ ಮೊಸರು

ಎಲ್ಲಾ ಪದಾರ್ಥಗಳನ್ನು ಸಮವಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಕೂದಲಿಗೆ ಅನ್ವಯಿಸಿ, 40 ನಿಮಿಷಗಳ ಕಾಲ ವಿಶ್ರಾಂತಿ ಮಾಡಿ. ಉಗುರು ಬೆಚ್ಚಗಿನ ನೀರಿನಿಂದ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

0

Leave a Reply

Your email address will not be published. Required fields are marked *